ಬೇರೂತ್, ಆ. 5,ಲೆಬನಾನ್ ರಾಜಧಾನಿ ಬೇರೂತ್ ನಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಇಟ್ಟಿದ್ದ ಗೋದಾಮಿನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 73 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 4,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ಹಾನಿಗೀಡಾಗಿವೆ.
ಸ್ಫೋಟದ ತೀವ್ರತೆಗೆ ಲೆಬನಾನ್ ರಾಜಧಾನಿಯಾಗಿರುವ ಬೇರೂತ್ ತತ್ತರಿಸಿ ಹೋಗಿದೆ. ರಾಜಧಾನಿಯ ಜನರಿಗೆ ಭೂಕಂಪದ ಅನುಭವವಾಗಿದೆ.ಗೋದಾಮಿನಲ್ಲಿ ಬಾಂಬ್ ಮತ್ತು ರಸಗೊಬ್ಬರ ತಯಾರಿಸುವ ೨,೭೫೦ ಟನ್ ಅಮೋನಿಯ ನೈಟ್ರೇಟ್ ಇತ್ತು.
ಬೆರೂತ್ ನಲ್ಲಿ ಮೊದಲ ಬಾರಿ ಸ್ಫೋಟ ಸಂಭವಿಸಿ ಹೊಗೆ ಬರುತ್ತಿದ್ದು, ಬೆಂಕಿ ಕಾಣಿಸಿಕೊಂಡಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಅದರ ಭೀಕರತೆ ಎಷ್ಟಿತ್ತೆಂದರೆ ಬೃಹತ್ ಬಲೂನ್ ಮಾದರಿಯ ಹೊಗೆ ಕಾಣಿಸಿಕೊಂಡಿದೆ. ಅಲ್ಲದೇ ನೂರಾರು ಕಿ.ಮೀ. ವರೆಗೂ ಸ್ಫೋಟ ಸದ್ದು ಕೇಳಿಸಿದೆ.15 ನಿಮಿಷದೊಳಗೆ ಬಂದರು ಮತ್ತು ಬೆರೂತ್ ನಗರದೊಳಗೆ ಸ್ಫೋಟಕ ವಸ್ತು ಸ್ಫೋಟಗೊಂಡಿದೆ. ಎರಡನೇ ಸ್ಫೋಟದ ತೀವ್ರತೆಗೆ ಇಡೀ ಬೆರೂತ್ ನಗರ ಹೊಗೆಮಯವಾಗಿದ್ದು, ಹೆಚ್ಚಿನ ಮನೆಗಳು ಸ್ಫೋಟಕ್ಕೆ ತುತ್ತಾಗಿವೆ. ಎರಡನೇ ಸ್ಫೋಟ ಮಾಜಿ ಪ್ರಧಾನಿ ರಫಿಕ್ ಹರಿರಿ ನಿವಾಸದ ಬಳಿ ಸಂಭವಿಸಿದೆ.
ಸ್ಫೋಟದ ಭೀಕರತೆಗೆ ಬೃಹತ್ ಕಟ್ಟಡಗಳು ಅದುರಿವೆ. 2750 ಟನ್ ಅಮೊನಿಯನ್ ನೈಟ್ರೆಟ್ ಸ್ಫೋಟಕ ಉಗ್ರಾಣದಲ್ಲಿ ಒಂದೇ ಕಡೆ ಕಳೆದ 6 ವರ್ಷಗಳಿಂದ ಸಂಗ್ರಹಿಸಲಾಗಿತ್ತು. ಇದು ಸ್ಫೋಟಗೊಂಡು ಹಾನಿ ಸಂಭವಿಸಿದೆ. ಉಗ್ರಾಣದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ.
ಬೇರೂತ್ ನಗರದಲ್ಲಿ ಸಂಭವಿಸಿದ ಭೀಕರ ಸ್ಫೋಟ ಬಳಿಕದ ದೃಶ್ಯ
