ದಿಲ್ಲಿ, ಆ. 4 : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ಆ.5ಕ್ಕೆ ಒಂದು ವರ್ಷವಾಗುತ್ತದೆ. ಈ ಪ್ರಯುಕ್ತ ಕೇಂದ್ರ ಸರಕಾರ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಈ ನಡುವೆ ಕಾಶ್ಮೀರದಲ್ಲಿ ಆ. 4 ಮತ್ತು 5ರಂದು ಕರ್ಫ್ಯೂ ಹೇರಲಾಗಿದೆ.
ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ಥಾನ ಪ್ರಾಸಯೋಜಿತ ಸಂಘಟನೆಗಳು ಆ.5ನ್ನು ಕರಾಳ ದಿನವೆಂದು ಆಚರಿಸಲು ಸಿದ್ಧತೆ ಮಾಡಿಕೊಂಡಿರುವ ಕುರಿತು ಬೇಹು ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಎರಡು ದಿನ ಕರ್ಫ್ಯೂ ಜಾರಿ ಮಾಡಲಾಗಿದೆ.
ಕಳೆದ ವರ್ಷ ಆ.5ರಂದು ಕೇಂದ್ರ 370ನೇ ವಿಧಿಯನ್ನು ರದ್ದುಪಡಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಜಮ್ಮು –ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಗಿತ್ತು.