ಪೇಜಾವರ ಮಠದಲ್ಲಿ ಭೂಮಿಪೂಜೆ ಸಂಭ್ರಮಾಚರಣೆ – ಶ್ರೀ ವಿಶ್ವೇಶತೀರ್ಥರಿಗೆ ಭಕ್ತಿ ಗೌರವ ಸಮರ್ಪಣೆ

ಉಡುಪಿ, ಆ. 4 : ಅಯೋಧ್ಯೆಯಲ್ಲಿ  ರಾಮಮಂದಿರ ನಿರ್ಮಾಣಕ್ಕೆ ಬುಧವಾರ ನೆರವೇರಲಿರುವ ಭೂಮಿಪೂಜೆಯ ಸಂಭ್ರಮಕ್ಕೆ ಇಡೀ ದೇಶ ಸಜ್ಜಾಗಿದೆ. ರಾಮ ಮಂದಿರ ವಿಮೋಚನೆ ಆಂದೋಲನದಲ್ಲಿ ಪ್ರಮುಖ  ಪಾತ್ರ ವಹಿಸಿದ್ದ ಶ್ರೀ ವಿಶ್ವೇಶ ತೀರ್ಥ  ಸ್ವಾಮೀಜಿಯವರ ಯೋಗದಾನವನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮ ಈ ಸಂದರ್ಭದಲ್ಲಿ ಉಡುಪಿಯ ಪೇಜಾವರ ಮಠದಲ್ಲಿ ನಡೆಯಲಿದೆ.

ಈ ಆಂದೋಲನಕ್ಕೆ  ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಕೊಡುಗೆ  , ಮಾರ್ಗದರ್ಶನ ,ಅವರು ನೀಡಿದ ಸ್ಫೂರ್ತಿ , ನೇತೃತ್ವ ಎಲ್ಲವನ್ನೂ ಸ್ಮರಿಸಿಕೊಂಡು ಅವರ ಭಾವಚಿತ್ರ , ಪೀಠಕ್ಕೆ ವಿಶೇಷ ಅಲಂಕಾರ ಮಾಡಿ 11.45 ರ ವೇಳೆಗೆ ಮಂಗಳಾರತಿ ಬೆಳಗಲಾಗುವುದು .  ಮಠದ ಮುಂಭಾಗದಲ್ಲಿ ರಥಬೀದಿಯಲ್ಲಿ  ಪಟಾಕಿ ಸಿಡಿಸಿ ಸಂಭ್ರಮಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

 













































error: Content is protected !!
Scroll to Top