ಸಂಪುಟ ವಿಸ್ತರಣೆ ಮೇಲೆ ಕೊರೊನಾ ಕರಿ ನೆರಳು?

ಬೆಂಗಳೂರು,ಆ. 4 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೊನಾ  ಸೋಂಕು ತಗಲಿರುವುದು  ದೃಢಪಟ್ಟು  ಆಸ್ಪತ್ರೆಗೆ ದಾಖಲಾಗಿರುವುದರಿಂದ ಸಂಪುಟ ವಿಸ್ತರಣೆ  ವಿಳಂಬವಾಗುವ ಸಾಧ್ಯತೆಯಿದೆ. ಸದರಿಂದಾಗಿ ಸಚಿವ ಆಕಾಂಕ್ಷಿ ಶಾಸಕರು ಮತ್ತು ಮೇಲ್ಮನೆ ಸದಸ್ರ ನಿರೀಕ್ಷೆ ಇನ್ನಷ್ಟು ದೀರ್ಘಗೊಂಡಿದೆ.

ಜೂನ್ನಲ್ಲಿ ಎಂ.ಟಿ.ಬಿ. ನಾಗರಾಜ್, ಆರ್. ಶಂಕರ್, ಸುನೀಲ್ ವಲ್ಲಾಪುರ ಮತ್ತು ಪ್ರತಾಪ್ ಸಿಂಹ ನಾಯಕ್ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.  ಕಳೆದ ತಿಂಗಳು ಎ.ಎಚ್. ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಬುಡ್ನಾ ಸಿದ್ಧಿ, ಸಿ. ಪಿ. ಯೋಗೇಶ್ವರ್ ಮತ್ತು ತಳವಾರ್ ಸಾಬಣ್ಣ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದರು.

ಸಂಪುಟ ವಿಸ್ತರಣೆ ಕುರಿತು ಪಕ್ಷದ ಹೈಕಮಾಂಡ್ ಜೊತೆಗೆ ಚರ್ಚಿಸಲು ಯಡಿಯೂರಪ್ಪ ಈ ವಾರ
ದಿಲ್ಲಿಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಕೊರೊನಾ  ಕಾರಣದಿಂದಾಗಿ ಕೆಲದಿನಗಳ ಮಟ್ಟಿಗೆ ಮುಖ್ಯಮಂತ್ರಿ ಎಲ್ಲಿಗೂ ಪ್ರಯಾಣ ಮಾಡುವಂತಿಲ್ಲ.

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸಚಿವೆ ಶಶಿಕಲಾ ಜೊಲ್ಲೆ ಇತ್ತೀಚಿಗೆ ದಿಲ್ಲಿಗೆ ಭೇಟಿ ನೀಡಿ, ತಮ್ಮ ಖುರ್ಚಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಕಸರತ್ತು ನಡೆಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

 error: Content is protected !!
Scroll to Top