ಮುಂಬಯಿಯಲ್ಲಿ ಭಾರಿ ಮಳೆ : ಕಾಂದಿವಲಿಯಲ್ಲಿ ಭೂ ಕುಸಿತ

-ಲೋಕಲ್‌ ರೈಲುಗಳು ಮತ್ತು ಬೆಸ್ಟ್‌ ಬಸ್‌ ಬಂದ್‌

-ಜನಜೀವನ ಅಸ್ತವ್ಯಸ್ತ

-24 ತಾಸು ಭಾರಿ ಮಳೆಯ ಮುನ್ನೆಚ್ಚರಿಕೆ

ಮುಂಬಯಿ, ಆ. 4 :  ನಿನ್ನೆ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಭಾರಿ ಮಳೆ  ಮುಬಯಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಮಲಾಡ್‌ –ಕಾಂದಿವಲಿ ನಡುವೆ ಭೂ ಕುಸಿತ ಸಂಭವಿಸಿ ವೆಸ್ಟರ್ನ್‌ ಎಕ್ಸ್‌ ಪ್ರೆಸ್‌ ಹೈವೇಯಲ್ಲಿ ಟ್ರಾಫಿಕ್‌ ಜಾಮ್‌ ಆಗಿದೆ. ಹೆದ್ದಾರಿಯ ಒಂದು ಬದಿಯಿಂದ  ಮಾತ್ರ ವಾಹನ ಸಂಚರಿಸುತ್ತಿದೆ.

ನಗರದ ಜೀವನಾಡಿಯಾಗಿರುವ ಲೋಕಲ್‌ ರೈಲು  ಸಂಚಾರ ಮೂರೂ ಲೈನುಗಳಲ್ಲಿ  ಆಂಶಿಕವಾಗಿ ರದ್ದಾಗಿದೆ. ಪಶ್ಚಿಮ  ರೈಲ್ವೇಯಲ್ಲಿ ಅಂಧೇರಿ- ಚರ್ಚ್‌ ಗೇಟ್‌, ಮಧ್ಯ ರೈಲ್ವೇಯಲ್ಲಿ ಥಾಣೆ-ಮುಂಬಯಿ ಮತ್ತು ಹಾರ್ಬರ್‌ ಲೈನಿನಲ್ಲಿ ಕುರ್ಲಾ- ಸಿಎಸ್ ಟಿ ನಡುವೆ ರೈಲು ಸಂಚಾರ ರದ್ದುಗೊಂಡಿದೆ.

ನಗರದ ಅಲ್ಲಲಿ ನೀರು ಜಮೆಯಾಗಿರುವ ಕಾರಣ  ಬೆಸ್ಟ್‌ ಬಸ್‌ ಸಂಚಾರವೂ ಬಹತೇಕ ರದ್ದಾಗಿದೆ. 16  ಕಡೆಗಳಲ್ಲಿ  ನೀರು ಜಮೆಯಾಗಿದೆ ಎಂದು ಬೆಸ್ಟ್‌ ವಕ್ತಾರ ತಿಳಿಸಿದ್ದಾರೆ.

 

 error: Content is protected !!
Scroll to Top