ಅಯೋಧ್ಯೆಯಲ್ಲಿ 29 ವರ್ಷದ ಹಿಂದೆ ಮೋದಿ  ಮಾಡಿದ್ದ  ಪ್ರತಿಜ್ಞೆ ಏನು ?

ಆಗಸ್ಟ್‌ 5 ರಂದು ಮೋದಿ ಅಯೋಧ್ಯೆಯಲ್ಲಿ  ರಾಮಮಂದಿರದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.ತಿಳಿದೋ ತಿಳಿಯದೆಯೋ ಮಾಡಿದ್ದ ಶಪಥವೊಂದು ಕೂಡಾ ಈ ದಿನ ನೆರವೇರಲಿದೆ. ಸುಮಾರು 29 ವರ್ಷಗಳ ಹಿಂದೆ ರಾಮ ಮಂದಿರ ಆಂದೋಲನದ ಸಮಯ 1991ರಲ್ಲಿ ಫೋಟೋಗ್ರಾಫರ್ ಒಬ್ಬರ ಜತೆ ಮಾತನಾಡುತ್ತಾ,’ ಯಾವ ದಿನ ರಾಮ ಮಂದಿರ ನಿರ್ಮಾಣ ಗೊಳ್ಳುತ್ತದೋ ಆ ದಿನ ಅಯೋಧ್ಯೆಗೆ ಮರಳಿ ಬರುತ್ತೇನೆ’ ಎಂದಿದ್ದರು.ಆ ಫೋಟೋ ಗ್ರಾಫರ್ ಮಹೇಂದ್ರ ತ್ರಿಪಾಠಿ.ಪ್ರಧಾನಿಯಾದ ಬಳಿಕ ಮೋದಿ ದೇಶ ವಿದೇಶದ ಹತ್ತು ಹಲವು ಪೂಜಾ ಸ್ಥಳಗಳಿಗೆ ಭೇಟಿ ನೀಡಿದ್ದರು.ಆದರೆ ಅಯೋಧ್ಯೆಗೆ ಭೇಟಿ ನೀಡಿರಲಿಲ್ಲವೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

ರಾಮಜನ್ಮಭೂಮಿ  ಬಳಿ ಫೋಟೋ ಸ್ಟುಡಿಯೊ ನಡೆಸುತ್ತಿರುವ ಮಹೇಂದ್ರ ತ್ರಿಪಾಠಿ ಅವರು ಹೇಳುವ ಪ್ರಕಾರ,’ 1991ರಲ್ಲಿ ಮೋದಿ ಮತ್ತು ಮುರಳಿಮನೋಹರ್ ಜೋಶಿ ಅವರ ಅಪರೂಪದ ಫೋಟೋ ಕ್ಲಿಕ್ಕಿಸಿದ್ದರು. ಆ ಸಮಯ ಮೋದಿ ಅವರ ಜತೆ ಮಾತುಕತೆ ನಡೆದಿತ್ತಂತೆ.ಆ ದಿನವನ್ನು ನೆನಪಿಸಿಕೊಳ್ಳುತ್ತಾ ತ್ರಿಪಾಠಿ ” ಬಿಜೆಪಿಯ ಹಿರಿಯ ನಾಯಕ ಮುರಳಿ‌ಮನೋಹರ ಜೋಶಿ ಜತೆ ಮೋದಿ ಅವರು 1991ರ ಎಪ್ರಿಲ್ ನಲ್ಲಿ ಅಯೋಧ್ಯೆಗೆ ಬಂದಿದ್ದು ವಿವಾದಿತ ಪ್ರದೇಶವನ್ನು ಸುತ್ತಾಡಿದ್ದರು.’ಮತ್ತೆ ಯಾವಾಗ ಬರುತ್ತೀರೆಂದು  ತಾನು‌ ಮತ್ತು ಕೆಲ ಪತ್ರಕರ್ತರು ಮೋದಿ ಅವರನ್ನು ಪ್ರಶ್ನಿಸಿದಾಗ,’ಯಾವಾಗ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗುತ್ತದೋ ಆ ದಿನ ಮರಳಿ ಬರುತ್ತೇನೆ’ಎಂಬುದಾಗಿ ಮೋದಿ ಉತ್ತರಿಸಿದ್ದರು.

1989 ರಿಂದ ವಿಶ್ವ ಹಿಂದೂ ಪರಿಷತ್ ನ ಫೋಟೋ ಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ತ್ರಿಪಾಠಿ ಯ ಛಾಯಾಚಿತ್ರಗಳೂ ಅಯೋಧ್ಯೆ ತೀರ್ಪಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿವೆ.ಅದರೂ ಅವರಿಗೆ ಭೂಮಿ ಪೂಜೆ ಕಾರ್ಯ ಕ್ರಮಕ್ಕೆ ಆಹ್ವಾನವಿಲ್ಲವಂತೆ.

ಏಳಿಂಜೆ ನಾಗೇಶ್,ಮುಂಬಯಿ

 

error: Content is protected !!
Scroll to Top