ಐಪಿಎಲ್‌ನಿಂದ ವಿವೊ ಪ್ರಾಯೋಜಕತ್ವ ಕೈಬಿಡಲು ಸಂಘ ಪರಿವಾರ ಒತ್ತಾಯ

ದಿಲ್ಲಿ, ಆ.4 : ಈ ವರ್ಷದ ಐಪಿಎಲ್‌ ಆವೃತ್ತಿಯನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐ ತಯಾರಿ ನಡೆಸುತ್ತಿರುವಂತೆಯೇ ಕೂಟದ ಪ್ರಾಯೋಜಕತ್ವವನ್ನು ಚೀನದ ಕಂಪೆನಿಯೊಂದಕ್ಕೆ ವಹಿಸಿರುವುದನ್ನು ಸಂಘ ಪರಿವಾರಕ್ಕೆ ಸೇರಿದ ಸಂಘಟನೆಯೊಂದು  ಬಲವಾಗಿ ಆಕ್ಷೇಪಿಸಿದೆ.

ಚೀನದ ವಿವೊ ಮೊಬೈಲ್‌ ಕಂಪನಿ ಐಪಿಎಲ್‌ ಕೂಟವನ್ನು ಪ್ರಾಯೋಜಿಸುತ್ತಿದೆ.ಭಾರತ ಮತ್ತು ಚೀನದ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್‌ ಎಸ್‌ ಎಸ್‌ ಅಂಗ ಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್‌ ವಿವೊ ಕಂಪನಿಯನ್ನು ಪ್ರಾಯೋಜಕತ್ವದಿಂದ ಹೊರಗಿಡಬೇಕೆಂದು ಆಗ್ರಹಿಸಿಸದೆ.

ಲಡಾಖ್‌ ಗಡಿಯಲ್ಲಿ ಚೀನ ಮಾಡಿದ ರಂಪಾಟದ ಬಳಿಕವೂ ವಿವೊ ಕಂಪನಿಯನ್ನು ಪ್ರಾಯೋಜಕರಾಗಿ ಮುಂದುವರಿಸುವುದು ಸರಿಯಲ್ಲ. ಬಿಸಿಸಿಐ ವಿವೊ ಪ್ರಾಯೋಕತ್ವವನ್ನು ಕೈ ಬಿಡದಿದ್ದರೆ ಐಪಿಎಲ್‌ ಬಹಿಷ್ಕರಿಸಲು ಹೋಕಾಟ ಮಾಡಬೇಕಾಡುತ್ತದೆ ಎಂದು ಸ್ವದೇಶಿ ಜಾಗರಣ ಮಂಚ್‌ ಎಚ್ಚರಿಸಿದೆ. ಚೀನ ನತ್ಪನ್ನ ಬಹಿಷ್ಕಾರ ಆಂದೋಲನದಲ್ಲಿ ಈ ಸಂಘಟನೆ ಮುಂಚೂಣಿಯಲ್ಲಿದೆ.

ಐದು ವರ್ಷದ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ವಿವೊ ಜೊತೆಗೆ 2017ರಲ್ಲಿ 2199 ಕೋ.ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ಇಡೀ ಜಗತ್ತು ಚೀನದ ವಿರುದ್ಧ ತಿರುಗಿ ಬಿದ್ದಿದೆ. ವಿಶ್ವದೆಲ್ಲೆಡೆ ಚೀನ ವಸ್ತುಗಳನ್ನು ಬಹಿಷ್ಕರಿಸುವ ಆಂದೋಲನ  ನಡೆಯುತ್ತಿದೆ. ಹೀಗಿರುವಾಗ ಬಿಸಿಸಿಐ ಚೀನ ಕಂಪನಿಯ ಪ್ರಾಯೋಜಕತ್ವ ಪಡೆದುಕೊಂಡಿರುವುದು ದೇಶದ್ರೋಹಕ್ಕೆ ಸಮಾನವಾದ ಕೃತ್ಯವಾಗುತ್ತದೆ ಎಂದು ಸಂಘಟನೆ ಹೇಳಿದೆ.

 error: Content is protected !!
Scroll to Top