ಗೌತಮ್ ಜ್ಯೋತ್ಸ್ನಾಗೆ ಪಿಎಚ್‌ಡಿ ಪದವಿ

0

ಕಾರ್ಕಳ : ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿಯ ಹಳೆ ವಿದ್ಯಾರ್ಥಿ ಗೌತಮ್ ಜ್ಯೋತ್ಸ್ನಾ ಅವರು ಕುವೆಂಪು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಗೆ ಭಾಜನರಾಗಿರುತ್ತಾರೆ. ಕುವೆಂಪು ವಿವಿಯ ಪ್ರಾಧ್ಯಾಪಕ ಡಾ. ನಾಗ್ಯಾ ನಾಯ್ಕ್ ಬಿ. ಎಚ್. ಅವರ ಮಾರ್ಗದರ್ಶನದಲ್ಲಿ ಗೌತಮ್‌ ಅವರು ಮಂಡಿಸಿದ ನೋಶನ್ಸ್ ಆಫ್ ರಿಯಾಲಿಟಿ ಇನ್ ದ ಫೀಲ್ಡ್ ಆಫ್ ಸ್ಟಾನ್ಲಿಕ್ಯೂಬ್ರಿಕ್ (ಸ್ಟಾನ್ಲಿಕ್ಯೂಬ್ರಿಕ್‌ನ ಸಿನಿಮಾಗಳಲ್ಲಿ ವಾಸ್ತವದ ಬಿಂಬಗಳು) ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವ ವಿದ್ಯಾಲಯವು ಡಾಕ್ಟರೇಟ್‌ ಪದವಿ ಘೋಷಿಸಿದೆ. ಗೌತಮ್‌ ಅವರು ಈ ಹಿಂದೆ ಕಾರ್ಕಳದಲ್ಲಿ ತಹಶೀಲ್ದಾರ್ ಆಗಿದ್ದ ಗುರುಪ್ರಸಾದ್ ಮತ್ತು ಸಾಹಿತಿ, ಜ್ಯೋತಿ ಗುರುಪ್ರಸಾದ್ ಅವರ ಪುತ್ರ.

Previous articleಐಪಿಎಲ್‌ನಿಂದ ವಿವೊ ಪ್ರಾಯೋಜಕತ್ವ ಕೈಬಿಡಲು ಸಂಘ ಪರಿವಾರ ಒತ್ತಾಯ
Next articleಶಿರಾ ಶಾಸಕ ನಿಧನ

LEAVE A REPLY

Please enter your comment!
Please enter your name here