800 ಮೀ. ಓಟ: ಎಸ್.ವಿ.ಟಿ. ಯ ಪುಟ್ಟರಾಜ ಹೊಸಗೌಡ್ರ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಉಡುಪಿ: ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ಎಂ.ಎನ್.ಡಿ.ಎಸ್.ಎಂ ಪ್ರೌಢಶಾಲೆ ಮುದ್ರಾಡಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಆಟೋಟ ಸ್ಪರ್ಧೆಯಲ್ಲಿ ಎಸ್.ವಿ.ಟಿ ಪದವಿ ಪೂರ್ವ ಕಾಲೇಜು ಕಾರ್ಕಳದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ಪುಟ್ಟರಾಜ ಹೊಸಗೌಡ್ರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 1500 ಮತ್ತು 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಾಧನೆಗೈದ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಹಿರಿಯ ಸಹ ಶಿಕ್ಷಕರು, ಅಧ್ಯಾಪಕ , ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.

ಇವರು ನಕ್ರೆ – ಪರಪು ನಿವಾಸಿ ಈರಮ್ಮ ಹೊಸಗೌಡ್ರ – ಶರಣಪ್ಪ ಹೊಸಗೌಡ್ರ ಅವರ ಪುತ್ರ.

a href="#" target="_blank">







































error: Content is protected !!
Scroll to Top