ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಬಳಿ ಬೆಂಕಿ ಆಕಸ್ಮಿಕ: ಅಗ್ನಿಶಾಮಕ ದಳದಿಂದ ಯಶಸ್ವಿ ಕಾರ್ಯಾಚರಣೆ

ಕಾರ್ಕಳ: ಇಲ್ಲಿನ ಬೈಲೂರು ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಬಳಿಯ ಛತ್ರದ ಸಮೀಪ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನ ಸುಮಾರು 12:00 ಗಂಟೆಯ ವೇಳೆಗೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಜ್ವಾಲೆ ವ್ಯಾಪಿಸಿದೆ. ಈ ಅನಾಹುತದಲ್ಲಿ ಪರಿಸರದ ಮರ-ಗಿಡಗಳು ಹಾಗೂ ಒಣಗಿದ ಪೊದೆಗಳು ಬೆಂಕಿಗೆ ಆಹುತಿಯಾಗಿವೆ. ಕಳೆದ ವರ್ಷವೂ ಇದೇ ಭಾಗದಲ್ಲಿ ಬೆಂಕಿ ಬಿದ್ದು ಹಾನಿ ಸಂಭವಿಸಿತ್ತು. ಆದರೆ, ಬೆಂಕಿಯು ಥೀಮ್ ಪಾರ್ಕ್‌ನ ಮುಖ್ಯ ಆವರಣಕ್ಕೆ ವ್ಯಾಪಿಸದ ಕಾರಣ ಯಾವುದೇ ಪ್ರಾಣಾಪಾಯ ಅಥವಾ ಕಟ್ಟಡಕ್ಕೆ ಹಾನಿ ಉಂಟಾಗಿಲ್ಲ.
​ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸುವ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಶ್ ನೇತೃತ್ವದಲ್ಲಿ, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಹರಿಶ್ಚಂದ್ರ ಶೆಟ್ಟಿಗಾರ್, ಅಚ್ಯುತ ಕರ್ಕೇರ, ಹರೀಶ್ ಮತ್ತು ಬಸವರಾಜ್ ಅವರು ಸತತವಾಗಿ ಶ್ರಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯೋಚಿತವಾಗಿ ಸ್ಪಂದಿಸಿದ ತಂಡವು ಬೆಂಕಿ ಮತ್ತಷ್ಟು ಹರಡದಂತೆ ತಡೆದಿದ್ದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.





























































































































error: Content is protected !!
Scroll to Top