94 ಸಿ ಆಕ್ಷೇಪಣೆಗಳಿಗೆ ಮನ್ನಣೆ ಬೇಡ – ತಹಶೀಲ್ದಾರ್‌ಗೆ ಸುನಿಲ್ ಕುಮಾರ್ ಸೂಚನೆ
ಕಾರ್ಕಳ : 94 ಸಿಯಲ್ಲಿ ಹಕ್ಕುಪತ್ರ ಸಿಗದಂತೆ ಮಾಡುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದು ಕಂಡುಬರುತ್ತಿದೆ. ಆಕ್ಷೇಪಣೆ, ಕಾನೂನು ಅಂತ ವಿನಾಃ ಕಾರಣ ವಿಳಂಬ ಮಾಡುತ್ತಿದ್ದೀರಿ. ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಹಕ್ಕುಪತ್ರ ನೀಡಬೇಕೆಂದು ಶಾಸಕ ವಿ. ಸುನಿಲ್ ಕುಮಾರ್ ತಹಶೀಲ್ದಾರ್ ಅವರಿಗೆ ತಾಕೀತು ಮಾಡಿದರು.
ಫೆ. 9ರಂದು ತಾಲೂಕು ಪಂಚಾಯತ್‌ನಲ್ಲಿ ಇಂಜಿನೀಯರಿಂಗ್ ವಿಭಾಗ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸುನಿಲ್ ಕುಮಾರ್ ಕಂದಾಯ ಅಧಿಕಾರಿಗಳು ಯಾವುದಾದರೊಂದು ಆಕ್ಷೇಪಣೆ ಬಂದಾಗ ನಾವ್ಯಾಕೆ ಸಿಕ್ಕಿಹಾಕಿಕೊಳ್ಳಲಿ ಅಂತ ಸುಮ್ಮನಾಗುತ್ತೀರಿ. ಈ ರೀತಿ ಆಗಬಾರದು ಕಾರ್ಕಳ ಪ್ರದೀಪ್ ಆರ್. ಹಾಗೂ ಹೆಬ್ರಿ ತಹಶೀಲ್ದಾರ್ ಪ್ರಸಾದ್ ಅವರಿಗೆ ಸೂಚಿಸಿದರು.
ಈ ವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಕಾರ್ಕಳ ತಾ.ಪಂ. ಇಒ ಪ್ರಶಾಂತ್, ಕಂದಾಯ ನಿರೀಕ್ಷಕರಾದ ಶಿವಪ್ರಸಾದ್, ರಿಯಾಜ್ ವಿವಿಧ ಇಲಾಖಾಧಿಕಾರಿಗ ಉಪಸ್ಥಿತರಿದ್ದರು.





















