ರಸ್ತೆ ಬದಿ ನೆಟ್ಟಿದ್ದ ಗಿಡಗಳು ಬೆಂಕಿಗಾಹುತಿ

ಕಾರ್ಕಳ : ರಸ್ತೆ ಬದಿ ನೆಟ್ಟಿದ್ದ ಗಿಡಗಳು ಬೆಂಕಿಗಾಹುತಿಯಾದ ಘಟನೆ ಫೆ. 9ರಂದು ಮಧ್ಯಾಹ್ನ ನೆಕ್ಲಾಜೆ ಕಾಳಿಕಾಂಬಾ ರಸ್ತೆ ಬದಿಯಲ್ಲಿ ನಡೆದಿದೆ. ಸಾರ್ವಜನಿಕ ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಹಾಗೂ ನೆಕ್ಲಾಜೆ ಕಾಳಿಕಾಂಬಾ ಆಡಳಿತ ಮಂಡಳಿಯ ವತಿಯಿಂದ 2023ರಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲಾಗಿದ್ದು, ಸಾರ್ವಜನಿಕ ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಪ್ರಕಾಶ್‌ ರಾವ್‌ ಅದರ ನಿರ್ವಹಣಾ ಕಾರ್ಯ ಮಾಡುತ್ತಿದ್ದರು. ಆದರೆ ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿ ಬೀರುಂಡಿ, ನೇರಳೆ, ಹಲಸು ಹಾಗೂ ಮಾವಿನ ಗಿಡ ಹಾನಿಯಾಗಿದೆ. ಯಾರೋ ಬೀಡಿ ಸೇದಿ ಎಸೆದಿದ್ದು, ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟರೆ ಅದರ ನಿರ್ವಹಣೆ ಕಷ್ಟ ಸಾಧ್ಯ ಎಂದು ಉತ್ತಮ ಫಲಗಳನ್ನು ನೀಡುವ 5 ಗಿಡಗಳನ್ನು ನೆಡಲಾಗಿತ್ತು. ಆದರೆ, ಜನರ ನಿರ್ಲಕ್ಷ್ಯಕ್ಕೆ ಅದು ಕೂಡ ಬೆಂಕಿಗಾಹುತಿಯಾಗಿದೆ ಎಂದು ಪ್ರಕಾಶ್‌ ರಾವ್‌ ವಿಷಾದ ವ್ಯಕ್ತಪಡಿಸಿದ್ದಾರೆ.































































































error: Content is protected !!
Scroll to Top