ಅಮುಲ್ ಬ್ರಾಂಡ್ ಹಾಲಿನ ದರದಲ್ಲಿ ಏರಿಕೆ – ಇಂದಿನಿಂದಲೇ ಹೊಸ ದರ​ ಅನ್ವಯ

ದೆಹಲಿ : ಇತ್ತೀಚಿಗಷ್ಟೇ ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಅಮುಲ್ ಬ್ರಾಂಡ್ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ಬುಧವಾರ ಭಾರತದಾದ್ಯಂತ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಹೊಸ ದರ ಮೇ 14 ರಿಂದ ಜಾರಿಗೆ ಬರಲಿದೆ.

ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದಲ್ಲಿನ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ವರ್ಷದಲ್ಲಿ ಜಾನುವಾರು ಮೇವು, ಹಾಲಿನ ಪ್ಯಾಕೇಜಿಂಗ್ ಫಿಲ್ಮ್ ಮತ್ತು ಇಂಧನದ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು GCMMF ತಿಳಿಸಿದೆ.

ನಂದಿನಿ ಹಾಲಿನ ದರ ಹೆಚ್ಚು ಅಂತ ಅಮುಲ್​ ಹಾಲು ಖರೀದಿಸುವವರಿಗೂ ಈಗ ಕಷ್ಟವಾಗಿದೆ. ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್​ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್​​ಗಳ ಬೆಲೆ ಏರಿಕೆಯಾಗಿದೆ.

ಈ ಹಾಲಿನ ಬೆಲೆ ಏರಿಕೆಯು ಆಹಾರ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಮಧ್ಯಮ ವರ್ಗದ ಗ್ರಾಹಕರ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರುತ್ತದೆ.





































error: Content is protected !!
Scroll to Top