ಉಚಿತ ಮೋಡೆಂ- ಉಚಿತ ಅನುಷ್ಠಾನ – ಮುಂಗಡ ಪಾವತಿ ಇಲ್ಲ
ಕಾರ್ಕಳ : ಬಿಎಸ್‌ಎನ್‌ಎಲ್ ಇದೀಗ ತನ್ನ ಗ್ರಾಹಕರಿಗೆ ಭರಪೂರ ಆಫರ್ ನೀಡುತ್ತಿದ್ದು, ಫೆ. 10ರಿಂದ ಕಾರ್ಕಳದಲ್ಲಿ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಮೇಳ ನಡೆಯಲಿದೆ. ಈ ನಿಟ್ಟಿನಲ್ಲಿ ಬಿಎಸ್‌ಎಲ್ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಕ್ಯಾಂಪೇನ್ ನಡೆಸಲಿದ್ದಾರೆ.
ಇತ್ತೀಚಿನ MAAN ತಂತ್ರಜ್ಞಾನ ಮತ್ತು ಅಡ್ವಾನ್ಸ್‌ಡ್ ಕೋರ್ ರೂಟರ್‌ಗಳ ಪರಿಚಯಾತ್ಮಕ ಕೊಡುಗೆಯಾಗಿ BSNL ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ವೇಗದ FTTH ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡುತ್ತಿದೆ.
100G ಅಪ್‌ಲಿಂಕ್
ಬಿಎಸ್‌ಎನ್‌ಎಲ್ ಇದೀಗ ಫೈಬರ್ ಸೇವೆಗಾಗಿ 100G ಅಪ್‌ಲಿಂಕನ್ನು ಅಳವಡಿಸಿದೆ. ಉಚಿತ ಮೋಡೆಮ್‌ನೊಂದಿಗೆ ಯಾವುದೇ ಅನುಸ್ಥಾನ ಶುಲ್ಕವಿಲ್ಲದೇ ಕನೆಕ್ಷನ್ ನೀಡಲಾಗುತ್ತಿದೆ.

ಬಿಎಸ್‌ಎಲ್‌ನ ಹೊಸ ಗ್ರಾಹಕರಿಗೆ 399 ರೂ. ಪ್ಯಾಕೇಜ್ ಲಭ್ಯವಿದೆ. ಟ್ರಯಲ್ ರೂಪದಲ್ಲಿ 1 ವರ್ಷದ ವರೆಗೆ ಇದೇ ಪ್ಯಾಕೇಜ್ ಇರಲಿದೆ. 50 ಎಂಬಿಪಿಎಸ್ ವೇಗದಲ್ಲಿ ಗ್ರಾಹಕರು ಅನಿಯಮಿತವಾಗಿ ಇಂಟರ್ ನೆಟ್ ಬಳಸಬಹುದಾಗಿದೆ.
ತ್ರಿಪಲ್ ಪ್ಲೇ ಸರ್ವಿಸ್
ಡೇಟಾ, ವಾಯ್ಸ್, ಐಪಿ ಟಿವಿ ಒಂದೇ ಸೂರಿನಡಿ ಸಂಪರ್ಕ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಕಳ BSNL ಗ್ರಾಹಕ ಸೇವಾ ಸಂಖ್ಯೆ: 08258-234100ಯನ್ನು ಸಂಪರ್ಕಿಸಬಹುದಾಗಿದೆ.





















