ಕಾರ್ಕಳ : ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಂಭ್ರಮ ಪ್ರಾರಂಭವಾಗುತ್ತದೆ. ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಹಬ್ಬವೇ ವರಮಹಾಲಕ್ಷ್ಮಿ. ಅಂತೆಯೇ ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬ ಸಂಭ್ರಮಾಚರಣೆ. ಈ ಹಬ್ಬವು ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಮುಖ್ಯವಾದ ಹಬ್ಬ. ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಮಹಿಳೆಯರು ಉಪವಾಸ ಕೈಗೊಳ್ಳುವ ಮೂಲಕ ವರಮಹಾಲಕ್ಷ್ಮಿ ವ್ರತ ಕೈಗೊಳ್ಳುತ್ತಾರೆ.
ಕಾರ್ಕಳ – ಹೆಬ್ರಿ ಉಭಯ ತಾಲೂಕಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಕಳ ಶ್ರೀ ರಾಮ ಮಂದಿರ, ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರ, ಬಂಡೀಮಠ ಮೂಡು ಮಹಾಗಣಪತಿ ದೇವಸ್ಥಾನ, ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಶ್ರೀ ರವಿಶಂಕರ್ ವಿದ್ಯಾಮಂದಿರ, ಅಂಡಾರು, ಶಿರ್ಲಾಲು, ಚಾರ, ವರಂಗ, ಮಾಳ, ಪಳ್ಳಿ, ನೀರೆ ಬೈಲೂರು, ಕಡ್ತಲ, ನಲ್ಲೂರು, ಮುಡಾರು ಬಜಗೋಳಿ, ಬೆಳ್ಮಣ್, ನಿಟ್ಟೆ ಉಭಯ ತಾಲೂಕಿನ ಹಲವೆಡೆ ಶ್ರೀ ವರಮಹಾಲಕ್ಷ್ಮೀ ಪೂಜೆಯು ಬಹಳ ಸಂಭ್ರಮದಿಂದ ಆಚರಿಸಲಾಯಿತು.























