ಕಾರ್ಕಳ : ಹಾವು ಕಚ್ಚಿ ಮಹಿಳೆ ಸಾವನಪ್ಪಿದ ದುರ್ಘಟನೆ ಆ. 26ರಂದು ಹಿರ್ಗಾನ ಗ್ರಾಮದ ತುಂಬೆಹಿತ್ಲುವಿನಲ್ಲಿ ನಡೆದಿದೆ. ಗುಲಾಬಿ (79) ಮೃತದುರ್ದೈವಿ.
ಮನೆಯ ಬಳಿ ಬಲ ಕೈಗೆ ಹಾವು ಕಚ್ಚಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗುಲಾಬಿ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















