ಕಾರ್ಕಳ : ಪೈಲಟ್ ತರಬೇತಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆಯ ಮರಿಯ ಮತ್ತು ಅಶೋಕ್ ಸಲ್ದಾನ ದಂಪತಿಯ ಪುತ್ರಿ ಶೈನಿ ಅಸ್ಮಾ ಸಲ್ಡಾನ ಅವರನ್ನು ಶಾಸಕ ಸುನಿಲ್ ಕುಮಾರ್ ಅವರು ಅಭಿನಂದಿಸಿದ್ದಾರೆ.
ಆ. 27ರಂದು ಶೈನಿ ಅಸ್ಮಾ ಸಲ್ಡಾನ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಶೈನಿ ಅವರು ಪೈಲೆಟ್ ತರಬೇತಿ ಪೂರ್ಣಗೊಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರ ಈ ಸಾಧನೆ ಮತ್ತಷ್ಟು ಯುವಜನೆತೆಗೆ ಸ್ಫೂರ್ತಿಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ತಾ.ಪಂ ಮಾಜಿ ಅಧ್ಯಕ್ಷರಾದ ವಿಕ್ರಮ್ ಹೆಗ್ಡೆ, ಮಾಲಿನಿ ಜೆ.ಶೆಟ್ಟಿ, ನೀರೆ ಗ್ರಾ.ಪಂ ಮಾಜಿ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಮಾಜಿ ಉಪಾಧ್ಯಕ್ಷೆ ವಿದ್ಯಾ ಶಶಿಧರ್ ಶೆಟ್ಟಿ, ಕೌಡೂರು ಗ್ರಾ. ಪಂ. ಮಾಜಿ ಸದಸ್ಯ ವಿಶ್ವೇಶ್ ದೇವಾಡಿಗ, ಸ್ಥಳೀಯರಾದ ಸಿಎ ಚಂದನ್ ಹೆಗ್ಡೆ, ಜೆರಾಲ್ಡ್ ಬರ್ಬೋಝಾ, ರಮೇಶ್ ಕಲ್ಲೊಟ್ಟೆ, ಜಗದೀಶ್ ತೆಂಡೂಲ್ಕರ್, ಸಂದೀಪ್ ಅಮಿನ್ ಪಳ್ಳಿ, ರಾಕೇಶ್ ಶೆಟ್ಟಿ ಕುಕ್ಕುಂದೂರು, ನೀರೆ ರವೀಂದ್ರ ನಾಯಕ್, ಯೋಗೇಶ್ ಕುಕ್ಕುಂದೂರು, ಶ್ರೀಕಾಂತ್ ಪ್ರಭು ಪಳ್ಳಿ, ರಘುರಾಮ್ ಶೆಟ್ಟಿ ಕಣಜಾರು, ರಾಜೇಶ್ ಕುಲಾಲ್, ಸತೀಶ್ ನಾಯಕ್, ವಿಶ್ವನಾಥ್ ಪೂಜಾರಿ ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.




















