ಕರಾಟೆ : ಕ್ರೈಸ್ಟ್‌ಕಿಂಗ್‌ನ ಸುದೀಕ್ಷಾ ಪೂಜಾರಿ ಮತ್ತು ಅಕ್ಷಯ್ ಪ್ರಭು ಜಿಲ್ಲಾ ಮಟ್ಟಕ್ಕೆ

ಕಾರ್ಕಳ : ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ವರ್ಧಮಾನ ಶಾಲೆ ಇವರ ವತಿಯಿಂದ ನಡೆದ ಕಾರ್ಕಳ ತಾಲೂಕು ಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗ ಹಾಗೂ ಬಾಲಕಿಯರ ವಿಭಾಗಗಳ ಕರಾಟೆ ಪಂದ್ಯಾಟದಲ್ಲಿ ಕಾರ್ಕಳದ ಕ್ರೆಸ್ಟ್‌ಕಿಂಗ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ಸುದೀಕ್ಷಾ ಪೂಜಾರಿ ಹಾಗೂ ಎಂಟನೇ ತರಗತಿಯ ಅಕ್ಷಯ್ ಪ್ರಭು ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಒಂಬತ್ತನೇ ತರಗತಿಯ ಸ್ಮಿತಿ ಶೆಟ್ಟಿ, ಎಂಟನೇ ತರಗತಿಯ ಮೊಯಿಷಾ, ಏಳನೇ ತರಗತಿಯ ಲಿಶಾ ಡಿ’ಸೋಜ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.







































error: Content is protected !!
Scroll to Top