ಮೀನು ಮಾಂಸ ದರದಲ್ಲಿ ಇಳಿಕೆ
ಕಾರ್ಕಳ : ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳು ಹೆಚ್ಚಾಗಿರುವುದರಿಂದ ತರಕಾರಿ, ಹಣ್ಣಿನ ಬೇಡಿಕೆ ಹೆಚ್ಚಾಗಿದೆ. ಇನ್ನು ಮೀನು ಮಾಂಸ ದರದಲ್ಲಿ ಇಳಿಕೆಯಾಗಿದ್ದು, ಬೇಡಿಕೆಯೂ ಕಡಿಮೆಯಿದೆ. 9 ರೂ. ಗೆ ಏರಿಕೆಯಾಗಿದ್ದ ಮೊಟ್ಟೆ ಬೆಲೆ ಕಳೆದ ವಾರಕ್ಕೆ 8, ಈ ವಾರ 7.5ರೂ. ಗೆ ಇಳಿದಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು : 50-60 ರೂ., ಮುಳ್ಳುಸೌತೆ : 30-40 ರೂ., (ಊರು – 100 ರೂ.) ಶುಂಠಿ : 100-120 ರೂ., ಟೊಮ್ಯಾಟೋ : 20 ರೂ., ಈರುಳ್ಳಿ : 55-60 ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 240-280 ರೂ., ಸೌತೆ : 20 -25 ರೂ., ಬೀನ್ಸ್ : 60-70 ರೂ., ಕಾಯಿಮೆಣಸು : 50-60 ರೂ., ಕ್ಯಾರೆಟ್ : 80-90 ರೂ., ಬೀಟ್ರೋಟ್ :50-60ರೂ., ಕ್ಯಾಬೇಜ್ : 30ರೂ., ಹೂಕೋಸು : 50 -60 ರೂ., ನವಿಲು ಕೋಸು -50 ರೂ., ಬೆಂಡೆ :50 ರೂ., ಕುಂಬಳಕಾಯಿ :25- 30 ರೂ., ಅಲಸಂಡೆ : 80 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 70 ರೂ., ಗೆಣಸು : 70-80 ರೂ., ಲಿಂಬೆ : 160 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 90-100 ರೂ., ಉದ್ದ ಮೆಣಸು : 60 -70ರೂ., ಬದಣೆ : 60 ರೂ., ಗುಳ್ಳ -140 ರೂ., ನುಗ್ಗೆ ಕಾಯಿ – 70ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ : 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ.ಗೆ
ಸೇಬು : -160-200 ರೂ., ದಾಳಿಂಬೆ : 160- 240 ರೂ., ದ್ರಾಕ್ಷಿ : 120 (ಬ್ಲ್ಯಾಕ್) -240 (ಗ್ರೀನ್) ರೂ., ಕಲ್ಲಂಗಡಿ : 30 ರೂ., ಬಾಳೆ : 120-140 ರೂ., ಕಿತ್ತಳೆ : 160-200 ರೂ., ಮೂಸಂಬಿ : 80 ರೂ., ಡ್ರಾಗ್ಯನ್ ಫ್ರುಟ್ : 240 ರೂ., ಪಪ್ಪಾಯ – 60 ರೂ., ಚಿಕ್ಕು – 100 ರೂ., ರಾಂಬೂಟನ್ – 400, ಪಿಯರ್ಸ್ – 420 ರೂ., ಕಿವಿ ಫ್ರೂಟ್ – 240 ರೂ., ಮಾವು – 200 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ – 800 ರೂ., (ಸಣ್ಣದು-500) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 250ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 300 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್) – 800 ರೂ., ಪಾಪ್ಲೆಟ್ (Balck) – 600 ರೂ., ವೈಟ್ ಪಾಪ್ಲೆಟ್- 700 ರೂ.(ಸಣ್ಣದು), ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 150 ರೂ., ತೇಡೆ – 200, ಕಾಂಡಾಯಿ – 200 ರೂ., ರೂಪ್ ಚಾಂದ್ – 200, ರೋ ಪಿಶ್ – 200 ರೂ., ಮರುವಾಯಿ – 100 ರೂ., ಅಪ್ನಾಸ್ – 250 ರೂ.,
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 300 ರೂ., ಬಾಯ್ಲರ್ : 180 ರೂ. (ಸ್ಕಿನ್ ಔಟ್ -210 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.5 ರೂ





















