ಸೆ. 5 : ಅನ್ಯಾರ್‌ಕಟ್ಟೆ ಮಾರುತಿ ಫ್ರೆಂಡ್ಸ್‌ – 28ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕಾರ್ಕಳ : ಕೌಡೂರು ನಿಂಜೂರು ಅನ್ಯಾರ್‌ಕಟ್ಟೆ ಶ್ರೀ ಮಾರುತಿ ಫ್ರೆಂಡ್ಸ್‌ ಇದರ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.5ರಂದು ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಗೋಪೂಜೆ, 10 ಗಂಟೆಗೆ ಭಜನಾ ಕಾರ್ಯಕ್ರಮ, 11 ಗಂಟೆಗೆ ಸಾಮೂಹಿಕ ಶನಿಪೂಜೆ, ಮಧ್ಯಾಹ್ನ 2 ಗಂಟೆಯಿಂದ ಮುದ್ದುಕೃಷ್ಣ ಸ್ಪರ್ಧೆ, 4 ಗಂಟೆಗೆ ಮಡಕೆ ಒಡೆಯುವುದು, ಆಟೋಟ ಸ್ಪರ್ಧೆ, 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 8.30ರಿಂದ ಮಂಗಳೂರು ಸಾಯಿಶಕ್ತಿ ಕಲಾಬಳಗದವರಿಂದ ತುಳು ಪೌರಾಣಿಕ ನಾಟಕ ಬನತ ಭೈರವೆ ಪ್ರದರ್ಶನಗೊಳ್ಳಲಿದೆ.

ರಾತ್ರಿ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದಿ ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉಪಾಧ್ಯಕ್ಷ ಪ್ರಶಾಂತ್‌ ಶೆಟ್ಟಿ ಬೈಲೂರು ವಹಿಸಲಿದ್ದು, ಶಾಸಕ ಸುನಿಲ್‌ ಕುಮಾರ್‌ ವಿ. ಕಾರ್ಯಕ್ರಮ ಉದ್ಘಾಟಿಸಲಿರುವರು. ದಾಮೋದರ್‌ ಶರ್ಮಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























































































































error: Content is protected !!
Scroll to Top