ವರಂಗ ಗೆಳೆಯರ ಬಳಗ ವಾರ್ಷಿಕೋತ್ಸವ

ಕಾರ್ಕಳ : ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ದೊರೆಯಬೇಕು. ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವರಂಗ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ವರಂಗ ರಥೋತ್ಸವ ಸಂದರ್ಭ ಪದ್ಮಾಂಬ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಗೆಳೆಯರ ಬಳಗದ 6ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ, ಸಾಂಸ್ಕೃತಿಕವಾಗಿ ತೊಡಗಿಸಿಕೊಂಡಾಗ ನೆಮ್ಮದಿ ಕಾಣಲು ಸಾಧ್ಯ. ವರಂಗದ ಗೆಳೆಯರ ಬಳಗದ ನಿರಂತರವಾಗಿ ಇಂತಹ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಹಾರೈಸಿದರು.

ಎಸ್‌ಕೆಪಿಎ ಮಾಜಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಮಾತನಾಡಿ, ವರಂಗ ಗೆಳೆಯರ ಬಳಗವು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾಜಮುಖಿಯಾಗಿ ಗುರುತಿಸಿಕೊಂಡಿರುವುದು ಉತ್ತಮ ವಿಚಾರ. ಸತೀಶ್‌ ಆಚಾರ್ಯ ವರಂಗ ಅವರ ಸಾರಥ್ಯದ ಗೆಳೆಯರ ಬಳಗಕ್ಕೆ ಸರ್ವರ ಸಹಕಾರವಿರಲಿ ಎಂದು ಆಶಿಸಿದರು.
ಜ್ಯೋತಿಷಿ ಅರುಣ್‌ ಭಟ್‌ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಕೆಪಿಎ ಕಾರ್ಕಳ ವಲಯದ ಅಧ್ಯಕ್ಷ ಪ್ರಮೋದ್ ಚಂದ್ರ ಪೈ ಮುನಿಯಾಲು, ಯುವವಾಹಿನಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಕೆರ್ವಾಶೆ, ಗೆಳೆಯರ ಬಳಗದ ಗೌರವಾಧ್ಯಕ್ಷ ಶಂಕರ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ನ್ಯೂಸ್‌ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ಮುಖ್ಯ ಶಿಕ್ಷಕ ರತ್ನಾಕರ ಆರಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಟಕದ ಪೋಸ್ಟರ್‌ ಬಿಡುಗಡೆ
ವಿ.ಆರ್.‌ ಸತೀಶ್‌ ಆಚಾರ್ಯ ಅವರ ರಚನೆ, ನಿರ್ದೇಶನದ ವಿಶ್ವರಂಗ ಕಲಾವಿದರು ವರಂಗ ತಂಡದ ನಾಟಕ ಗೀತಾಂಜಲಿ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಸನ್ಮಾನ
ಸದಾಶಿವ ಶೆಟ್ಟಿ ಕಾರ್ಕಳ, ವಿನೋದ್ ಶೆಟ್ಟಿ ನಿಟ್ಟೆ, ಸುರೇಶ್ ನಿಟ್ಟೆ ವಿ.ಆರ್. ಸತೀಶ್ ಆಚಾರ್ಯ ವರಂಗ, ಉದಯ ಶೆಟ್ಟಿ ಮುಟ್ಲಪಾಡಿ, ಅವಿನಾಶ್ ಪೂಜಾರಿ ಮುದ್ರಬೆಟ್ಟ್ ವರಂಗ, ಸುರೇಶ್ ಪೂಜಾರಿ ಬೈರಂಪಳ್ಳಿ, ವೀಣಾ ಆರ್. ಭಟ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ನೃತ್ಯ ವೈವಿದ್ಯಮಯ, ಗೀತಾಂಜಲಿ ನಾಟಕ ಪ್ರದರ್ಶನಗೊಂಡಿತು.









































error: Content is protected !!
Scroll to Top