ಮಯಾಮಿ : ಅಂತರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತರಾಗುವುದಾಗಿ ಅರ್ಜೆಂಟೀನಾದ ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ಅವರು ಪ್ರಕಟಿಸಿದರು. ಜುಲೈನಲ್ಲಿ ಅವರು ಸತತ ಎರಡನೇ ಬಾರಿ ತಮ್ಮ ತಂಡವನ್ನು ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ತಲುಪಿಸಿದ್ದರು.
ಈ ನಿರ್ಧಾರವನ್ನು ತುಂಬಾ ನೋವಿನಿಂದ ತಗೆದುಕೊಂಡಿದ್ದೇನೆ. ಆದರೆ ಇದು ಸಕಾಲವೆಂದು ನನಗೆ ಅನಿಸಿದೆ ಎಂದು 39 ವರ್ಷದ ಆಟಗಾರ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಾನು ಎಲ್ಲವನ್ನೂ ಈ ಆಟಕ್ಕೆ ನೀಡಿದ್ದೇನೆ ಎಂದು ಪ್ರಮಾಣಿಸುವೆ. ಕೆಲವು ವರ್ಷಗಳ ಹಿಂದೆ ವಿಶ್ವಕಪ್ ಗೆದ್ದಾಗ ಮಾತ್ರವಲ್ಲ, ಅರ್ಜೆಂಟೀನಾ ಪೋಷಾಕು ಧರಿಸುವಾಗಲೆಲ್ಲಾ ನಾನು ಪ್ರತಿಬಾರಿ ಹೋರಾಟ ನಡೆಸಿ ನನ್ನ ಸಾಮರ್ಥವನ್ನೆಲ್ಲಾ ಬಳಸಿದ್ದೆ ಎಂದು ಅವರು ಹೇಳಿದ್ದಾರೆ.
ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ದೋಹಾದಲ್ಲಿ ನಡೆದ 2022ರ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ ಈ ವರ್ಷದ ಜುಲೈ 19ರಂದು ನ್ಯೂಜರ್ಸಿಯಲ್ಲಿ ನಡೆದ ಫೈನಲ್‌ನಲ್ಲಿ ಸ್ಪೇನ್ ಎದುರು ಏಕೈಕ ಗೋಲಿನಿಂದ ಸೋತಿತ್ತು.
ಈ ತಿಂಗಳ ಆರಂಭದಲ್ಲಿ ಅವರು ತಂದೆ ಜಾರ್ಜ್ ನಿಧನರಾಗಿದ್ದರು. ಆ ಬಳಿಕ ಮೆಸ್ಸಿ ಅವರು, ಇನ್ನು ದೀರ್ಘ ಕಾಲ ಯಾವುದೇ ರೀತಿಯ ಫುಟ್‌ಬಾಲ್ ಆಡುವ ಬಗ್ಗೆ ನನಗೆ ಗಂಭೀರ ಸಂದೇಹಗಳಿವೆ ಎಂದಿದ್ದರು.
ಫುಟ್‌ಬಾಲ್ ಕ್ಲಬ್ ಇಂಟರ್ ಮಯಾಮಿ ಜೊತೆ ಮೆಸ್ಸಿ ಅವರ ಒಪ್ಪಂದ 2028ರ ಕೊನೆಯವರೆಗೆ ಇದೆ.
ಅಂತರಾಷ್ಟ್ರೀಯ ಸಾಧನೆ
ಅರ್ಜೆಂಟೀನಾ ಪರ ಆಡಿದ ಪಂದ್ಯಗಳು: 207
ಗಳಿಸಿದ ಗೋಲುಗಳು: 125
ಪದಾರ್ಪಣೆ: 2005. ಹಂಗೆರಿ ವಿರುದ್ಧ ಆ ಸೌಹಾರ್ದ ಪಂದ್ಯದಲ್ಲಿ ಎದುರಾಳಿ ಆಟಗಾರನಿಗೆ ಮೊಣಕೈಯಿಂದ ಗುದ್ದಿದ್ದಕ್ಕೆ, ಶರ್ಟ್ ಎಳೆದಿದ್ದಕ್ಕೆ ಕೆಲವೇ ಕ್ಷಣಗಳಲ್ಲಿ ಹೊರನಡೆಯಬೇಕಾಯಿತು.

ಆಡಿದ ವಿಶ್ವಕಪ್‌ಗಳು: 6
2026ರ ವಿಶ್ವಕಪ್‌ನಲ್ಲಿ ಎಂಟು ಗೋಲು, 4 ಅಸಿಸ್ಟ್
ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ಆಡಿದ ಎರಡನೇ ಆಟಗಾರ.
ಎರಡು ವಿಶ್ವಕಪ್‌ಗಳಲ್ಲಿ (2014, 2022) ಚಿನ್ನದ ಚೆಂಡು ಗೌರವ
ಒಲಿಂಪಿಕ್ಸ್ ಚಿನ್ನ (2008 ಬೀಜಿಂಗ್)
2021 ಮತ್ತು 2024ರಲ್ಲಿ ಕೊಪಾ ಅಮೆರಿಕ ಟೂರ್ನಿಯ ಪ್ರಶಸ್ತಿ.
ಪ್ರತಿನಿಧಿಸಿದ ಕ್ಲಬ್‌ಗಳು: ಬಾರ್ಸಿಲೋನಾ, ಪ್ಯಾರಿಸ್ ಸೇಂಟ್ ಜರ್ಮನ್, ಇಂಟರ್ ಮಯಾಮಿ.















