ಕಾರ್ಕಳ : ಅತ್ತೂರು ಚರ್ಚ್ ಬಳಿ ಬೆನ್ಜ್ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು, ಪರಿಣಾಮ ಸವಾರರು ಗಾಯಗೊಂಡ ಘಟನೆ ಫೆ. 5ರ ಸಂಜೆ ನಡೆದಿದೆ. ಬೈಕ್ ಸವಾರರಾದ ನಿಟ್ಟೆ ಕಾಲೇಜಿನ ಇಂಜಿನೀಯರಿಂಗ್ ವಿದ್ಯಾರ್ಥಿಗಳಾದ ರುದ್ರೇಶ್ ಹಾಗೂ ಹರೀಶ್ ಗಾಯಗೊಂಡವರು.
ದೂಪದಕಟ್ಟೆಯಿಂದ ಕಾರ್ಕಳ ಬರುತ್ತಿದ್ದ ಬೆನ್ಜ್ ಕಾರಿಗೆ ಕಾರ್ಕಳದಿಂದ ದೂಪದಕಟ್ಟೆಯತ್ತ ಸಾಗುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್ ರಸ್ತೆ ದಾಟಿ ಪೊದೆಗುರುಳಿದೆ. ಗಂಭೀರವಾಗಿ ಗಾಯಗೊಂಡಿರುವ ಸವಾರರಿಗೆ ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅತ್ತೂರು ಚರ್ಚ್ ಬಳಿ ಅಪಘಾತ – ಬೈಕ್ ಸವಾರರಿಗೆ ಗಾಯ























