ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾದಲ್ಲಿ ತುಳುನಾಡಿನ ಕಂಬಳ ಸಹ ನಡೆಯಲಿದ್ದು, ಇದು ಕರಾವಳಿಯ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸಲಿದೆ.
ದಸರಾದಲ್ಲಿ ಕಂಬಳ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಈ ಕ್ರೀಡೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಕೋಣಗಳ ಮಾಲೀಕರು ಮತ್ತು ಕೋಣಗಳನ್ನು ಓಡಿಸುವವರು ತಮ್ಮ ಹೆಸರುಗಳನ್ನು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಸೆ. 30 ರ ಮುನ್ನ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆಗೆ https://mysoredasara.gov.in ಅಥವಾ ಜಿಲ್ಲಾ ಪಂಚಾಯತ್ ಕಚೇರಿಯಿಂದ ಪ್ರಾಧಿಕಾರದ ಸಹಿ ಇರುವ ಭೌತಿಕ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕಂಬಳ ಉಪ ಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.









































