ಉಡುಪಿ ಜಿಲ್ಲಾ ‘ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿ’ ಗೆ ಅರ್ಜಿ ಆಹ್ವಾನ

ಉಡುಪಿ: ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನಿಸಲಾಗುವ, ಡಾ. ಸುಧಾಕರ ಶೆಟ್ಟಿ, (ಅಧ್ಯಕ್ಷರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು) ಇವರ ಪ್ರಾಯೋಜಕತ್ವದಲ್ಲಿ ದಿ| ಪ್ರೊ. ಎಂ. ರಾಮಚಂದ್ರ ಸ್ಮರಣೆಯ, ಉಡುಪಿ ಜಿಲ್ಲೆಯ ‘ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿ’ ಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಶಾಶ್ವತ ಫಲಕವನ್ನು ಒಳಗೊಂಡಿದೆ.

ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು
ದೇವದಾಸ್ ಕೆರೆಮನೆ, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ, C/o “ವಂದ್ಯುಕ್ತ” ನಿಸರ್ಗನಗರ, ಶ್ಯಾಮಲಾ ಕಾಂಪೌಂಡ್, ಮಿಯ್ಯಾರು, ಮುಡಾರು, ಬಜಗೋಳಿ ಅಂಚೆ, ಕಾರ್ಕಳ -574122 ಈ ವಿಳಾಸಕ್ಕೆ ಅ. 15 ರ ಒಳಗೆ ತಲುಪುವಂತೆ ಕಳುಹಿಸಿ ಕೊಡುವಂತೆ‌ ಸೂಚಿಸಲಾಗಿದೆ.















































error: Content is protected !!
Scroll to Top