ಶಿರ್ವ: ಸಾರ್ವಜನಿಕ ಸ್ಥಳದಲ್ಲಿ ಹಣ ಪಣಕ್ಕಿಟ್ಟು ಕೋಳಿ ಅಂಕ ಜೂಜಿನಲ್ಲಿ ತೊಡಗಿಕೊಂಡಿದ್ದ ಹಲವರನ್ನು ಶಿರ್ವ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರ್ವ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಸುದೇಶ್ ಶೆಟ್ಟಿ ಅವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಸೂಡಾದ ನರೇಂದ್ರ ಫ್ರಭು(61), ಬೆಳ್ಮಣ್ಣಿನ ಪ್ರಕಾಶ್ ಕಾಮತ್(45), ಇನ್ನಾ ಗ್ರಾಮದ ರಮೇಶ(49), ಇನ್ನಾದ ಜಯ ಪೂಜಾರಿ(64), ಪಾಂಗಳದ ರಾಘವೇಂದ್ರ(48), ಶಿರ್ವದ ಕಾಪುವಿನ ಜೆರಾಲ್ಡ್ ಮಥಾಯಸ್(67), ನಂದಳಿಕೆಯ ರಮೇಶ್ ಮೂಲ್ಯ(50), ಬೋಳದ ಅಶೋಕ(48), ನಂದಳಿಕೆಯ ರೋಹಿತ್ ಸರೋಜನ್(26) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ್ದ 10,600/ ರೂ. ಮೌಲ್ಯದ 13 ಹುಂಜಗಳು, 5 ಬಾಳು, 2000 ರೂ. ನಗದು, 10 ದ್ವಿಚಕ್ರ ವಾಹನ, 25 ಹಳೆಯ ಪ್ಲಾಸ್ಟಿಕ್ ಕುರ್ಚಿ, ಶಾಮಿಯಾನ, 8 ಕಬ್ಬಿಣದ ಪೈಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2026 ಕಲಂ: 112 BNS 2023 U/s 87, 93 KP ACT. U/s 11(1)(n) Prevention of cruelty animal Act ರಂತೆ ಪ್ರಕರಣ ದಾಖಲಾಗಿರುತ್ತದೆ.























