ಕಾರು – ಬಸ್ ನಡುವೆ ಅಪಘಾತ: ಹಲವರಿಗೆ ಗಾಯ

ಕಾರ್ಕಳ: ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಕಾರ್ಕಳದ ಸಾಣೂರಿನ ರಾಮ ಮಂದಿರದ ಸಮೀಪ ಸಂಭವಿಸಿದೆ.

ಈ ಸಂಬಂಧ ಕಿರಣ್ ಜೋನ್ಸನ್ ಪಿರೇರಾ ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಪಿರ್ಯಾದಿದಾರರಾದ ಕಿರಣ್‌ ಜೋನ್ಸನ್‌ ಪಿರೇರಾ (45),ಮಂಗಳೂರು ಅವರು ಮಂಗಳೂರಿನಿಂದ ಮೂಡಬಿದ್ರಿ ಮಾರ್ಗವಾಗಿ ಕಾರ್ಕಳಕ್ಕೆ ತನ್ನ ಕಾರಿನಲ್ಲಿ ಹೊರಟು ಕಾರ್ಕಳ ತಾಲೂಕು ಸಾಣೂರು ಗ್ರಾಮದ ರಾಮ ಮಂದಿರದ ಎದುರುಗಡೆ ತಲುಪಿದಾಗ ಅವರ ಹಿಂದುಗಡೆಯಿಂದ ಬರುತ್ತಿದ್ದ ಇನ್ನೋವಾ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದ. ಪರಿಣಾಮ ಕಾರ್ಕಳದಿಂದ ಮೂಡಬಿದ್ರಿ ಕಡೆಗೆ ಹೋಗುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಕಾರು ಚಾಲಕ ಅಭಿಷೇಕ್‌ ಪ್ರಯಾಣಿಕರಾದ ರಮಾನಾಥ ರೈ, ಡೆನ್ಜಿಲ್‌, ಚರಣ್‌ ಸೋಮೇಶ್‌ ಎಂಬವರಿಗೆ ಗಾಯಗಳಾಗಿವೆ. ಕಾರ್ಕಳ ಸರಕಾರಿ ಆಸ್ಪತ್ರೆ ಮತ್ತು ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಕರಿಗೂ ಗಾಯಗಳಾಗಿವೆ. ಅಪಘಾತದ ಕಾರಣಕ್ಕೆ ಎರಡೂ ವಾಹನಗಳು ಜಖಂ ಆಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2026 ಕಲಂ: 281, 125(a), 125 (b) BNS ರಂತೆ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top