ಕಾರುಗಳ ನಡುವೆ ಅಪಘಾತ: ಇಬ್ಬರಿಗೆ ಗಾಯ, ದೂರು ದಾಖಲು

ಕಾರ್ಕಳ: ಕಾರುಗಳೆರಡರ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಕಲ್ಯಾ‌ದ ಬೋರುಗುಡ್ಡೆಯ ಅಶೋಕನಗರದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಕಲ್ಯಾದ ಪ್ರಶಾಂತ್ ಮತ್ತು ಅವರ ಪತ್ನಿ ರೇಖಾ ಎಂದು ಗುರುತಿಸಲಾಗಿದೆ.

ರೇಖಾ ಮತ್ತು ಪ್ರಶಾಂತ್ ಅವರು ಕೆಲಸಕ್ಕೆಂದು ಕಲ್ಯಾದಿಂದ ಕಾರ್ಕಳದತ್ತ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಕಳ‌ ಕಡೆಯಿಂದ ಸಂದೀಪ್ ಡಿಸೋಜಾ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ರೇಖಾ ಅವರಿದ್ದ ‌ಕಾರಿಗೆ ಗುದ್ದಿದೆ. ಪರಿಣಾಮ ಪ್ರಶಾಂತ್ ಅವರ ತಲೆ ಮತ್ತು ಬಲಗಾಲಿಗೆ ಗಾಯಗಳಾಗಿವೆ. ರೇಖಾ ಅವರಿಗೂ ತಲೆ, ಭುಜ, ಎರಡೂ ಕಾಲುಗಳಿಗೆ ಗಾಯಗಳಾಗಿದ್ದು ಕಾರ್ಕಳದ ಟಿ. ಎಂ.ಎ. ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಗಾಯಾಳು ರೇಖಾ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿರುದ್ಧ ದಿಕ್ಕಿನಿಂದ ಬಂದ ಕಾರು ಚಾಲಕ ಸಂದೀಪ್ ಡಿಸೋಜಾ ಅವರ ನಿರ್ಲಕ್ಷ್ಯ ಮತ್ತು ಅತಿ ವೇಗದ ಕಾರಣದಿಂದಲೇ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.















































error: Content is protected !!
Scroll to Top