ನಿಟ್ಟೆಯಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಸಂಪನ್ನ

ನಿಟ್ಟೆ: ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ(ರಿ.), ನಿಟ್ಟೆ, ಇದರ ವತಿಯಿಂದ ಸಮಾಜ ಕಲ್ಯಾಣಾರ್ಥವಾಗಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವವು ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಇವರ ಸಹಭಾಗಿತ್ವದಲ್ಲಿ ನಿಟ್ಟೆ ಪ್ರಾಥಮಿಕ ಶಾಲೆಯ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಸಭಾಭವನದಲ್ಲಿ ಬೋಳಾ ಮಂಜುನಾಥ ಪುರೋಹಿತರ ಪೌರೋಹಿತ್ಯದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಹರ್ಷವರ್ಧನ್ ಆಚಾರ್ಯ ನಿಟ್ಟೆ ವಹಿಸಿದ್ದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಎಸ್. ಕೆ. ಜಿ. ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರಿನ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಮತ್ತು ನಿಟ್ಟೆ ಪ್ರಾಥಮಿಕ ಅರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ| ಶ್ರೇಯ ಡಿ. ಆಚಾರ್ಯ ಅವರ ಉಪಸ್ಥಿತಿಯಲ್ಲಿ ನೆರವೇರಿತು.

ನಿಟ್ಟೆ ವಿದ್ಯಾ ಸಂಸ್ಥೆಗಳ ಮುಖ್ಯಸ್ಥ ಎನ್. ವಿನಯ್ ಹೆಗ್ಡೆ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ, ಸಭಾ ವೇದಿಕೆಗೆ ಗೌರವಾರ್ಥವಾಗಿ “ಶ್ರೀ ಎನ್. ವಿನಯ್ ಹೆಗ್ಡೆ ವೇದಿಕೆ” ಎಂದು ನಾಮಕರಣ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಮತ್ತು ನಿಷ್ಠಾವಂತ ಸದಸ್ಯ ಮಾಧವ ಆಚಾರ್ಯ ಕೆಮ್ಮಣ್ಣು, ರಾಷ್ಟೀಯ ಮಟ್ಟದ ಮನ್ನಣೆಯ ಮವೇದಾಸ್ ಫುಡ್ಸ್ ಮತ್ತು ಸೀರಿಯಲ್ಸ್ ಪ್ರೈವೇಟ್ ಲಿ. ನ ಸ್ಥಾಪಕಿ ಅನುಷಾ ಪ್ರಜ್ವಲ್ ಆಚಾರ್ಯರಿಗೆ “ಪ್ರೇರಣಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಮಿತಿಯ ವತಿಯಿಂದ ಪ್ರತಿಭಾನ್ವಿತ 54 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯುತ್ತಮ ಅಂಕಗಳಿಸಿ ಸಾಧನೆಗೈದ ಸೌಮ್ಯ ಹಾಗೂ ಎಸ್. ಎಸ್.ಎಲ್.ಸಿ ವಿಭಾಗದಲ್ಲಿ ರಿತೀಶ್ ಅವರಿಗೆ “ವಿದ್ಯಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ನಿಟ್ಟೆ ವಿಶ್ವಕರ್ಮ ಸಂಘದ ನೂತನ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು.

ಜೊತೆಕಾರ್ಯದರ್ಶಿ ಯೋಗೀಶ್ ಆಚಾರ್ಯ ವಾರ್ಷಿಕ ವರದಿಯನ್ನು ವಾಚಿಸಿದರು. ಖ್ಯಾತ ವಾಗ್ಮಿ ಹಾಗು ಸಾಮಾಜಿಕ ಚಿಂತಕರಾದ ಶ್ರೀ ದಾಮೋದರ ಶರ್ಮಾ, ಉಡುಪಿ ಜಿಲ್ಲಾ ಲೆಕ್ಕಾಧಿಕಾರಿ ಮತ್ತು ಯೋಜನಾ ನಿರ್ದೇಶಕರು ಶ್ರೀ ವಿಜಯ್ ಕುಮಾರ್, ಉಡುಪಿಯ ಉದ್ಯಮಿ ಶ್ರೀಪತಿ ಆಚಾರ್, ಉಡುಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಶ್ರೀ ಸತೀಶ್ ಆಚಾರ್ಯ, ನಿಟ್ಟೆ ನಡಿಮನೆಯ ಬಿ. ಕೆ. ನಾಯಕ್, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಜಯಾನಂದ ಆಚಾರ್ಯ, ಸಮಿತಿಯ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮಣ್ ಆಚಾರ್ಯ, ಕಾರ್ಯದರ್ಶಿ ಶ್ರೀ ಮುರಳೀಧರ ಆಚಾರ್ಯ, ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವತ್ಸಲಾ ಉಮೇಶ ಆಚಾರ್ಯ, ಗೌರವಾಧ್ಯಕ್ಷರಾದ ಶ್ರೀಮತಿ ವೀಣಾ ದಿವಾಕರ ಆಚಾರ್ಯ, ಉಪಾಧ್ಯಕ್ಷರಾದ ಶ್ರೀಮತಿ ಪ್ರಮಿಳಾ ಜಲಂಧರ ಆಚಾರ್ಯ, ಹಾಗೂ ಕಾರ್ಯದರ್ಶಿ ರಕ್ಷಿತಾ ಸುನಿಲ್ ಆಚಾರ್ಯ, ಕೋಶಾಧಿಕಾರಿ ಆಶಾ ಜಯಾನಂದ ಆಚಾರ್ಯ , ವಿಶ್ವಕರ್ಮ ಯುವ ವೇದಿಕೆಯ ಉಪಾಧ್ಯಕ್ಷರಾದ ಸುಧೀರ್ ಆಚಾರ್ಯ ಕಲ್ಯಾ ಹಾಗೂ ವಿವಿಧ ವಿಶ್ವಕರ್ಮ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವಕರ್ಮ ಯುವವೇದಿಕೆಯ ಅಧ್ಯಕ್ಷ ಪ್ರದೀಪ್ ಆಚಾರ್ಯ ಪರಪ್ಪಾಡಿ ಸ್ವಾಗತಿಸಿದರು, ಪ್ರಸಾದ್ ಆಚಾರ್ಯ, ಶ್ರೇಯಾ, ಸೌಜನ್ಯ, ಸೌಮ್ಯ ನಿರೂಪಿಸಿದರು. ಕೋಶಾಧಿಕಾರಿ ಶ್ರೀಧರ ಆಚಾರ್ಯ ಕೆಮ್ಮಣ್ಣು ವಂದಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು. ನಿಟ್ಟೆ ಸಮಿತಿಯ ಪ್ರದೀಪ್ ಆಚಾರ್ಯ ಕೆಮ್ಮಣ್ಣು ಅವರ ಮೆಲೋಡಿ ಮ್ಯೂಸಿಕಲ್ ತಂಡ ಮತ್ತು ಸಮಾಜ ಬಾಂಧವರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಸಮಾರಂಭ ಸಂಪನ್ನಗೊಂಡಿತು.















































error: Content is protected !!
Scroll to Top