ಕಾರ್ಕಳ: ಶ್ರೀ ಬಾಲಾಜಿ ಅಯ್ಯಪ್ಪ ಮಂದಿರ ಕಾರ್ಕಳ ಇಲ್ಲಿ ಸೆ. 21 ರಿಂದ ಸೆ. 24 ರ ವರೆಗೆ ವೇದಮೂರ್ತಿ ನಾರಾಯಣ ಭಟ್ ರೆಂಜಾಳ ಮತ್ತು ರಾಮಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಶತಚಂಡಿಕಾ ಯಾಗ, ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು.
ಸೆ. 21 ರಂದು ಸ್ವಸ್ತಿ ದೇವತಾ ಪ್ರಾರ್ಥನೆ, ಪಂಚಗವ್ಯ- ಪುಣ್ಯಾಹವಾಚನ, ತೋರಣಮುಹೂರ್ತ, ಉಗ್ರಾಣ ಮುಹೂರ್ತ, ಯಜ್ಞ ಶಾಲೆಯಲ್ಲಿ ವಾಸ್ತುಹೋಮ, ವಾಸ್ತು ಪೂಜೆ, ರಕ್ಷೆಘ್ನ ಹೋಮ, ದಿಕ್ಷಾಲಕ ಬಲಿ ನಡೆಯಲಿರುವುದು.
ಸೆ. 22 ರಂದು ಪಾಶಂಕುಶ, ಏಕಾದಶಿ, ಋತ್ವಿಜರ ಆಗಮನ, ಸಪ್ತ ಶತೀ ಪಾರಾಯಣ ಪ್ರಾರಂಭ, ಸಂಜೆ ಗಂಟೆ 4.00ರಿಂದ ಶ್ರೀಶ ಕಡೆಕಾರ್‌ರವರಿಂದ ‘ಸಂಗೀತ ಗಾನವೈಭವ’ ನಡೆಯಲಿದೆ.

ಸೆ. 23 ರಂದು ಬೆಳಿಗ್ಗೆ ಗಂಟೆ 8.00ರಿಂದ ಪಂಚಗವ್ಯ ಪುಣ್ಯಾಹವಾಚನ ಋತ್ವಿಜರ ಸಪ್ತ ಶತೀ ಪಾರಾಯಣ, ಆದ್ಯ ಗಣಯಾಗ, ಆರಣಿ ಮಥನದಿಂದ ಅಗ್ನಿ ಜನನ ವೇದಮೂರ್ತಿ ಬ್ರಹ್ಮಶ್ರೀ ರಾಮಕೃಷ್ಣ ತಂತ್ರಿ ಕುಕ್ಕಿ ಕಟ್ಟೆಯವರ ನೇತೃತ್ವದಲ್ಲಿ ನವಾಕ್ಷರೀ ಮಂತ್ರ ಹೋಮ, ಅಯ್ಯಪ್ಪ ಸಹಸ್ರನಾಮ, ಮಂತ್ರ ಹೋಮ, ಕ್ಷೇತ್ರ ದೇವರಾದ ನಾಗನಿಗೆ ಪಂಚಾಮೃತ ಅಭಿಷೇಕ, ರಕ್ತೇಶ್ವರಿಗೆ ಪನಿಯಾರ, ಪರ್ವಪ್ರಸನ್ನ ಪೂಜೆ, ಶ್ರೀ ಅಯ್ಯಪ್ಪ ಸ್ವಾಮಿಗೆ ತ್ರಿಕಾಲ ಪೂಜಾ ಸಹಿತ ಪಡಿ ಪೂಜೆ, ಮಧ್ಯಾಹ್ನ ಗಂಟೆ 12.00ರಿಂದ ಪ್ರಸಾದ ವಿತರಣೆ ಹಾಗೂ ‘ಅನ್ನಸಂತರ್ಪಣೆ’ ಸಂಜೆ ಗಂಟೆ 4.00ರಿಂದ ವೇದಮೂರ್ತಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರಿಂದ ದುರ್ಗಾನಮಸ್ಕಾರ ಪೂಜೆ ಹಾಗೂ ಶ್ರೀ ಸುಬ್ರಹ್ಮಣ್ಯ ಕಾರಂತರವರಿಂದ ‘ಸಂಗೀತ ಗಾನವೈಭವ’, ಋತ್ವಿಜರಿಂದ ಪಾರಾಯಣ ಸಹಿತ ಪ್ರಸನ್ನ ಪೂಜೆ, ಯಾಗ ಶಾಲೆಯಲ್ಲಿ ಅಷ್ಟಾವಧಾನ ಸೇವೆ, ಕುಡುಪು ನಾಗೇಂದ್ರ ಬಳಗದವರಿಂದ ಪಂಚವಾದ್ಯ ಸಹಿತ ಚೆಂಡೆವಾದನ, ಮಹಾಪೂಜೆ ಪ್ರಸಾದ ವಿತರಣೆ, ‘ಅನ್ನಸಂತರ್ಪಣೆ’ ಕಾರ್ಯಕ್ರಮಗಳು ನಡೆಯಲಿವೆ.
ಸೆ. 24 ರಂದು ಪಂಚಗವ್ಯ ಪುಣ್ಯಹವಾಚನ, ಶ್ರೀ ದುರ್ಗಾಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ 10 ಗಂಟೆಗೆ ಒದಗುವ ತುಲಾ ಲಗ್ನ ಸುಮುಹೂರ್ತದಲ್ಲಿ ಶತ ಚಂಡಿಕಾಯಾಗ ಪೂರ್ಣಾಹುತಿ, ನಂತರ ಕನ್ನಿಕಾರಾಧನೆ, ಸುಹಾಸಿನಿ ಆರಾಧನೆ, ಬ್ರಾಹ್ಮಣಾರಾಧನೆ, ವಟುವಾರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ ತೀರ್ಥ ಪ್ರಸಾದ ವಿತರಣೆ ಹಾಗೂ ‘ಅನ್ನಸಂತರ್ಪಣೆ’ ಬ್ರಾಹ್ಮಣಾರಾಧನೆ ಕಾರ್ಯಕ್ರಮಗಳು ನಡೆಯಲಿವೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.























