ಮಲಬದ್ಧತೆಗೆ ಉಪಯುಕ್ತವಾದ ಔಷಧಿ ಸಸ್ಯ ಇಸಬುಗೋಲ್. ಇದರ ಗುಣ ಹಾಗೂ ಆರೋಗ್ಯ ಲಾಭವನ್ನು ತಿಳಿದುಕೊಳ್ಳೋಣ. ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚಿರುವುದರಿಂದ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ರುಚಿಯಲ್ಲಿ ಸಿಹಿ ಇದ್ದು ಸ್ನಿಘ್ಧ ಗುಣ ಹೊಂದಿದೆ. ಇದು ಜೀರ್ಣವಾಗಲು ಸಮಯ ಹಿಡಿಯುತ್ತದೆ. ಶೀತ ವೀರ್ಯ ಸ್ವಭಾವ ಹೊಂದಿದೆ. ವಾತ ಹಾಗೂ ಪಿತ್ತವನ್ನು ಶಮನಗೊಳಿಸುತ್ತದೆ. ಇದರ ಬೀಜ ಹಾಗೂ ಹೊಟ್ಟು ಉಪಯೋಗಿಸುತ್ತಾರೆ.
ಇಸಬಗೋಲಿನ ಆರೋಗ್ಯ ಲಾಭಗಳು
ಇದನ್ನು ಮಲಬದ್ಧತೆ, ಮೂತ್ರ ಉರಿ, ಪೈಲ್ಸ್, ಇರಿಟೇಬಲ್ ಬವಲ್ ಸಿಂಡ್ರೋಮ್, ಅಜೀರ್ಣ. ಆಸಿಡಿಟಿ, ಕರುಳಿನ ಹುಣ್ಣು, ಹೃದಯ ಉರಿ, ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್, ತೂಕ ಇಳಿಸಲು, ರಕ್ತ ಪಿತದಲ್ಲಿ ಉಪಯೋಗಿಸುತ್ತಾರೆ.
ಹೇಗೆ ಸೇವಿಸುವುದು
ಇಸಬಗೋಲಿನ ಚೂರ್ಣ ಒಂದು ಚಮಚ ಒಂದು ಗ್ಲಾಸ್ ನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.
ಮಲಬದ್ಧತೆಗೆ ರಾತ್ರಿ ನಿದ್ದೆ ಮಾಡುವ ಒಂದು ಗಂಟೆಯ ಮೊದಲು ಸೇವಿಸಿ.
ಸಕ್ಕರೆ ಕಾಯಿಲೆ ಇರುವವರು ಒಂದು ಚಮಚ ಚೂರ್ಣವನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಆಹಾರ ಸೇವನೆಯ ಮುಂಚೆ ಸೇವಿಸಿ.
ಯಕೃತ್ತಿನ ಸಮಸ್ಯೆ ಅಥವಾ ಕೊಲೆಸ್ಟ್ರಾಲ್ ಕಮ್ಮಿ ಮಾಡಲು ಒಂದು ಚಮಚ ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಅರ್ಧ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ತೂಕ ಇಳಿಸಲು ಒಂದು ಚಮಚ ಚೂರ್ಣವನ್ನು ಒಂದು ಗ್ಲಾಸ್ ನೀರಿನಲ್ಲಿ ಊಟ ಮಾಡುವ ಒಂದು ಗಂಟೆ ಮೊದಲು ಸೇವಿಸಿ.
ಅಸಿಡಿಟಿಯಲ್ಲಿ ಒಂದು ಚಮಚ ಚೂರ್ಣವನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಸೇವಿಸಿ.
ಭೇದಿಯಾದಲ್ಲಿ ಕಾಲು ಚಮಚ ಚೂರ್ಣವನ್ನು ಒಂದು ಗ್ಲಾಸ್ ಮಜ್ಜಿಗೆ ಜೊತೆಗೆ ಅಥವಾ ಮೊಸರಿನ ಜೊತೆ ಸೇವಿಸಬಹುದು.
ರಕ್ತ ಪಿತ್ತ ಜಾಸ್ತಿ ಇದ್ದಲ್ಲಿ ಅರ್ಧ ಚಮಚ ಚೂರ್ಣವನ್ನು ಒಂದು ಗ್ಲಾಸ್ ತಣ್ಣೀರಿನಲ್ಲಿ ಹಾಕಿ ಸೇವಿಸಿ.

ಇಸಬಗೋಲನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸಬಾರದು. ಎರಡು ಚಮಚಕ್ಕಿಂತ ಜಾಸ್ತಿ ಸೇವಿಸಬೇಡಿ. ನಮ್ಮ ದೇಹ ಪ್ರಕೃತಿಗೆ ಅನುಸಾರವಾಗಿ ಸೇವಿಸಿ. 21 ದಿವಸಗಳ ಕಾಲ ಸೇವಿಸಬಹುದು. ಅದಕ್ಕಿಂತ ಜಾಸ್ತಿ ಸೇವಿಸಬೇಡಿ. ಸೇವಿಸುವ ಮುನ್ನ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.





