ವೇಷ ಕಳಚುವ ಮುನ್ನವೇ ಮಹಿಷಾಸುರ ಪಾತ್ರಧಾರಿ ನಿರ್ಗಮನ

ಯಕ್ಷಗಾನ ಕಲಾವಿದ ಈಶ್ವರ ಗೌಡ ಹೃದಯಾಘಾತಕ್ಕೆ ಬಲಿ

ಉಡುಪಿ : ಮಂದಾರ್ತಿ ಎರಡನೇ ಮೇಳದ ಕಲಾವಿದ ಈಶ್ವರ ಗೌಡ ಅವರು ನಿನ್ನೆ ರಾತ್ರಿ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಕುಸಿದು ಬಿದ್ದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಶೃಂಗೇರಿ ಸಮೀಪದ ನೆಮ್ಮಾರ್‌ ನಿವಾಸಿಯಾಗಿದ್ದ ಈಶ್ವರ ಗೌಡ ಅವರು ಮಂದಾರ್ತಿ 2ನೇ ಮೇಳದ ಪ್ರತಿಭಾನ್ವಿತ ಕಲಾವಿದ. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ವೇಷ ಕಳಚುವ ಮುನ್ನವೇ ಬಣ್ಣದ ಮನೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಇಹಲೋಕ ತ್ಯಜಿಸಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.































































































error: Content is protected !!
Scroll to Top