ವಿಶ್ವಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟ – ಭಾರತ ತಂಡಕ್ಕೆ ಕ್ರೈಸ್ಟ್‌ಕಿಂಗ್‌ನ ಶಗುನ್ ಎಸ್. ವರ್ಮ ಆಯ್ಕೆ

ಕಾರ್ಕಳ : ಕ್ರೈಸ್ಟ್‌ಕಿಂಗ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ 15ರ ವಯೋಮಿತಿಯ ವಿಶ್ವಾಶಾಲಾ ಬಾಲಕಿಯರ ವಿಭಾಗದ ವಿಶ್ವ ವಾಲಿಬಾಲ್ ಪಂದ್ಯಾಟದ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಕೆ 15ರ ವಯೋಮಿತಿಯ ಭಾರತೀಯ ವಾಲಿವಾಲ್ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಆಟಗಾರ್ತಿ. ಅಂತರಾಷ್ಟ್ರೀಯ ಪಂದ್ಯವು ಡಿಸೆಂಬರ್ ತಿಂಗಳ 4 ರಿಂದ 13ನೇ ತಾರೀಖಿನವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದೆ. ಶಗುನ್ ಎಸ್. ವರ್ಮ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮ ಹಾಗೂ ಶ್ರುತಿರಾಜ್ ದಂಪತಿ ಪುತ್ರಿ.































































































error: Content is protected !!
Scroll to Top