ಜೋಡುಕಟ್ಟೆಯಲ್ಲಿ ಬಸ್‌ ಪಲ್ಟಿ

ಕಾರ್ಕಳ : ಮಂಗಳೂರಿನಿಂದ ಕಾರ್ಕಳ ಆಗಿ ದಾವಣಗೆರೆ ಸಾಗುತ್ತಿದ್ದ ಶ್ರೀ ದುರ್ಗಾಂಬಾ ಬಸ್ ಬುಧವಾರ ರಾತ್ರಿ ಜೋಡುಕಟ್ಟೆಯಲ್ಲಿ ಪಲ್ಟಿಯಾಗಿದೆ. ಬಸ್‌ನಲ್ಲಿ ಒಟ್ಟು 15 ಮಂದಿ ಪ್ರಯಾಣಿಕರಿದ್ದು ನಾಲ್ವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಇಬ್ಬರು ಚಾಲಕರಿದ್ದು ಓರ್ವ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಅಪಘಾತದಿಂದಾಗಿ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಡೈವರ್ಸನ್‌ ಬೋರ್ಡ್‌ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

































































































error: Content is protected !!
Scroll to Top