ಬೆಳೆ ಕಾಯಲು ಗದ್ದೆ ಬದಿ ಮಲಗಲು ಹೋಗಿದ್ದ ಕೃಷಿಕ ನಿಧನ

ಕಾರ್ಕಳ : ಬೆಳೆ ಕಾಯುವುದಕ್ಕಾಗಿ ರಾತ್ರಿ ಗದ್ದೆ ಬದಿ ಮಲಗಲು ಹೋಗಿದ್ದ ಕೃಷಿಕರೋರ್ವರು ಮೃತಪಟ್ಟ ಘಟನೆ ಮುಂಡ್ಲಿ ಗ್ರಾಮದಲ್ಲಿ ಸಂಭವಿಸಿದೆ.‌‌ ಸಂದೀಪ್ ಹೆಗ್ಡೆ (39) ಮೃತ ದುರ್ದೈವಿ.

ಸಂದೀಪ್ ಅವರು ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವ ಸಲುವಾಗಿ ಪ್ರತಿನಿತ್ಯ ಗದ್ದೆ‌ ಬದಿಯಲ್ಲಿ ನಿರ್ಮಿಸಿದ್ದ (ಗುಡುಂಬು) ಸ್ಥಳದಲ್ಲಿ ಮಲಗುತ್ತಿದ್ದರು. ಅಂತೆಯೇ ನ. 6ರ ರಾತ್ರಿ ಮಲಗಲು ಹೋಗಿದ್ದು, ಬೆಳಗ್ಗೆ ಬೇಗ ಮನೆಗೆ ಬರುತ್ತಿದ್ದವರು ಬಾರದೆ ಇದ್ದಾಗ ಮನೆಯವರು ಹೋಗಿ ನೋಡಿದಾಗ, ಗುಡುಂಬಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಮೃತರು ತಂದೆ, ತಾಯಿ, ಪತ್ನಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.









































































































error: Content is protected !!
Scroll to Top