ಉಡುಪಿ : ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಂಘದಲ್ಲಿ ನಡೆದ ಜಿಲ್ಲಾ ಮಟ್ಟದ ಕುಂಭ ಕಲಾ ಸಂಭ್ರಮದಲ್ಲಿ ಕಾರ್ಕಳ ಕುಲಾಲ ಸಂಘವು ನೃತ್ಯ ವಿಭಾಗದಲ್ಲಿ ವಿನ್ನರ್ ಆಗಿ ಹೊರಹೊಮ್ಮಿದೆ. ಪ್ಯಾಶನ್ ಶೋ ಸ್ಪರ್ಧೆಯಲ್ಲಿ ಕಾರ್ಕಳ ಕುಲಾಲ ಸಂಘದ ಕುಮಾರಿ ಧನ್ಯ ಕುಲಾಲ್ ಪ್ರಶಸ್ತಿ ಭಾಜನರಾಗಿದ್ದಾರೆ. ಹೊಸ್ಮಾರು ಕುಲಾಲ ಸಂಘವು ನೃತ್ಯ ಸ್ಪರ್ಧೆಯಲ್ಲಿ ಉತ್ತಮ ತಂಡವಾಗಿ, ಸಂತೋಷ್ ಕುಲಾಲ್ ಹೊಸ್ಮಾರು ಉತ್ತಮ ನಿರೂಪಕರಾಗಿ, ಗಣೇಶ್ ಹೆರ್ಮುಂಡೆ ಹಾಡುಗಾರಿಕೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇರ್ವತ್ತೂರು ಕುಲಾಲ ಸಂಘದ ಶ್ವೇತಾ ಕುಲಾಲ್ ಹಾಡುಗಾರಿಕೆಯಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ರಚಿತಾ ಕುಲಾಲ್ ಹೆಬ್ರಿ, ಕಾವ್ಯ ಕುಲಾಲ್ ಪ್ರಶಸ್ತಿ ಪಡೆದಿದ್ದಾರೆ.
ಕಾರ್ಕಳ ಕುಲಾಲ ಸಂಘಕ್ಕೆ ಹಲವು ಪ್ರಶಸ್ತಿ




















