ತೀವ್ರ ಮಳೆಯಿಂದಾಗಿ ಮೀನಿನ ಇಳುವರಿಯಲ್ಲಿ ಕುಂಠಿತ – ಬೆಲೆ ಏರಿಕೆ
ಕಾರ್ಕಳ : ಶ್ರಾವಣ ಮಾಸವಾದ್ದರಿಂದ ಮೀನು ಮಾಂಸದ ಬೇಡಿಕೆಯಲ್ಲಿ ಇಳಿಕೆಯಾಗಿದೆ. ಇನ್ನು ತೀವ್ರ ಮಳೆಯಿಂದಾಗಿ ಸಮರ್ಪಕವಾದ ಮೀನುಗಾರಿಕೆಯಿಲ್ಲದೆ ಮಾರುಕಟ್ಟೆಯಲ್ಲಿ ಮೀನು ಲಭ್ಯತೆ ಕಡಿಮೆಯಾಗಿದೆ ಅಲ್ಲದೆ ಬೆಲೆ ಏರಿಕೆಗೂ ಕಾರಣವಾಗಿದೆ. ಇದಲ್ಲದೆ ಮಳೆಯ ತೀವ್ರತೆಯಿಂದಾಗಿ ಕ್ಯಾಪ್ಸಿಕಂ (ದೊಣ್ಣೆಮೆಣಸು), ಸಾಂಬಾರ್ ಸೌತೆ, ತೊಂಡೆಕಾಯಿ, ಅಲಸಂಡೆ ಹಾಗೂ ಬಾಳೆಹಣ್ಣಿನ ಇಳುವರಿ ಕಡಿಮೆಯಿದ್ದು ಬೆಲೆಯಲ್ಲಿ ಏರಿಕೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50ರೂ., ಮುಳ್ಳುಸೌತೆ : 30 ರೂ., ಶುಂಠಿ : 80ರೂ., (ಹೊಸ ಶುಂಠಿ 60ರೂ.) ಟೊಮ್ಯಾಟೋ : 40ರೂ., ಈರುಳ್ಳಿ : 28 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ 100-140: ರೂ., ಸೌತೆ : 50-60 ರೂ., ಬೀನ್ಸ್ : 50-60 ರೂ., ಕಾಯಿಮೆಣಸು : 70 ರೂ., ಕ್ಯಾರೆಟ್ : 60-70 ರೂ., ಬೀಟ್ರೋಟ್ : 40 ರೂ., ಕ್ಯಾಬೇಜ್ : 25-30 ರೂ., ಹೂಕೋಸು : 40-50 ರೂ., ನವೀಲು ಕೋಸು : 49 ರೂ. ಬೆಂಡೆ : 50 ರೂ., ಕುಂಬಳಕಾಯಿ : 30ರೂ., ಅಲಸಂಡೆ : 70-80 ರೂ., ತೊಂಡೆಕಾಯಿ : 80ರೂ., ಹಾಗಲಕಾಯಿ : 70 ರೂ., ಗೆಣಸು : 40 ರೂ., ಲಿಂಬೆ : 100 ರೂ., ಮೂಲಂಗಿ : 35 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 160 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ : 60ರೂ., ಹೀರೆ ಕಾಯಿ : 90 (ಊರು) ರೂ., ಘಾಟಿ ಹೀರೆ : 60 ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 100-240 ರೂ., ದಾಳಿಂಬೆ : 160-240ರೂ., ದ್ರಾಕ್ಷಿ : 140 ರೂ., ಕಲ್ಲಂಗಡಿ :30-40 ರೂ., ಬಾಳೆ : 120ರೂ., ಕಿತ್ತಳೆ : 120 ರೂ., ಮೂಸಂಬಿ : 50-80ರೂ., ಸೀತಾಫಲ – 100 ರೂ., ರಾಂಬೂಟನ್ – 240-320ರೂ., ಡ್ರಾಗ್ಯನ್ ಫ್ರುಟ್ – 100-200ರೂ., ಪಪ್ಪಾಯ – 40 ರೂ.
ಭಾರತೀಯ ಸೇಬು ಪ್ರಸ್ತುತ ಸೀಸನಲ್ ಫ್ರೂಟ್ ಆಗಿದೆ.
ಮೀನಿನ ದರ ಕೆ. ಜಿ. ಗೆ
ಅಂಜಲ್ : 700 ರೂ., (ಸಣ್ಣದು-400) ಕೊಡ್ಡಾಯಿ : 400 ರೂ., ಬಂಗುಡೆ : 400ರೂ., (ಸಣ್ಣದು – 300ರೂ.) ಬೂತಾಯಿ : 400 ರೂ., ನಂಗ್ : 500 ರೂ., ಮುರು : 300 ರೂ., ಡಿಸ್ಕೋ : 300ರೂ., ಕ್ರ್ಯಾಬ್ : 300 ರೂ., ಬೊಳ್ಳೆಂಜೀರ್ : 300 ರೂ., ಸಿಗಡಿ : 300 ರೂ., ಅಡೆಮೀನು : 400 ರೂ., ಕಾಣೆ (ಲೇಡಿ ಫಿಶ್) : 500 ರೂ., ಪಾಪ್ಲೆಟ್ : 1500 ರೂ., ಕಪ್ಪು ಮಾಂಜಿ – 400 ರೂ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ :230 ರೂ., ಬಾಯ್ಲರ್ : 170 ರೂ. (ಸ್ಕಿನ್ ಔಟ್ : 200 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.5 ರೂ.
































































