ಅ.12 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಕಾರ್ಕಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಾರ್ಕಳದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಅ. 12ರಂದು ಕಾರ್ಕಳದ ನೌಕರರ ಸಂಘ ಬಂಡೀಮಠದಲ್ಲಿ ನಡೆಯಲಿರುವುದು. ಮಹಾಸಭೆಯಲ್ಲಿ 2024-25ನೇ ಸಾಲಿನ ಹತ್ತನೇ ತರಗತಿ, ದ್ವಿತೀಯ ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಇಬ್ಬರು ಸರಕಾರಿ ನೌಕರರ ಮಕ್ಕಳನ್ನು ಗುರುತಿಸಿ ಗೌರವಿಸಲಾಗುವುದು ಮತ್ತು 2024 ಜುಲೈ 1ರಿಂದ 2025 ಸೆಪ್ಟಂಬರ್‌ 30ರಅವಧಿಯಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದ ಸರಕಾರಿ ನೌಕರರನ್ನು ಗುರುತಿಸಿ ಗೌರವಿಸಲಾಗುವುದು. ವಿದ್ಯಾರ್ಥಿಗಳ ಅಂಕಪಟ್ಟಿಯ ಯಥಾ ನಕಲು ಮತ್ತು ಭಾವಚಿತ್ರ ಜೊತೆಗೆ ಸರಕಾರಿ ನೌಕರರ ವಿವರಗಳನ್ನು ಸೆ. 20ರ ಒಳಗೆ ಸಂಘದ ಕಚೇರಿಗೆ ತಲುಪಿಸುವುದರೊಂದಿಗೆ, ಹೆಚ್ಚಿನ ಮಾಹಿತಿಗಾಗಿ ಸಂಘದ ಕಾರ್ಯದರ್ಶಿ ಗೀತಾ ಕೆ. ದೂರವಾಣಿ ಸಂಖ್ಯೆ 9900496859 ಸಂಪರ್ಕಿಸಬಹುದಾಗಿದೆ.





























































































































error: Content is protected !!
Scroll to Top