ಕಾರ್ಕಳ : ತೋಟದಿಂದ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರಗಳು ಕಳವು

ಕಾರ್ಕಳ : ತೋಟದಲ್ಲಿದ್ದ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರಗಳನ್ನು ಕಳವು ಗೈದಿರುವ ಘಟನೆ ಜೂ.17ರಂದು ನಿಟ್ಟೆ ಗ್ರಾಮದಲ್ಲಿ ವರದಿಯಾಗಿದೆ. ನಿಟ್ಟೆ ಗ್ರಾಮದ ಹೇನೊಟ್ಟುವಿನ ದಿನೇಶ್‌ ಎಂಬವರು 16 ವರ್ಷದ ಹಿಂದೆ ತಮ್ಮ ತೋಟದಲ್ಲಿ 225 ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದರು. ಜೂ. 17ರಂದು ತೋಟದಲ್ಲಿದ್ದ 9 ಶ್ರೀಗಂಧದ ಮರಗಳು ಕಳವಾಗಿರುವುದು ಗಮನಕ್ಕೆ ಬಂದಿರುತ್ತದೆ. ಕಳವಾದ ಮರಗಳ ಮೌಲ್ಯ 4,00,000 ರೂ. ಆಗಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top