ಲೌಕಿಕ ಶಿಕ್ಷಣದ ಜೊತೆ ಆಧ್ಯಾತ್ಮಿಕ ಶಿಕ್ಷಣವು ಅಗತ್ಯ – ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ

ಕಾರ್ಕಳ : ಲೌಕಿಕ ಶಿಕ್ಷಣದ ಜೊತೆ ಆಧ್ಯಾತ್ಮಿಕ ಶಿಕ್ಷಣವು ಅತೀ ಅಗತ್ಯ, ಮಹಾ ಸಂಸ್ಥಾನದ ವೇದಪಾಠ ಶಾಲೆಯನ್ನು ಎಲ್ಲ ಪ್ರದೇಶಗಳ ಸಜ್ಜನ ಬಂಧುಗಳು ಸದುಪಯೋಗಗೊಳಿಸಬೇಕು. ಸ್ಥಳೀಯರು ವೇದಾಧ್ಯಯನ ಮಾಡಿದಲ್ಲಿ ಸ್ಥಳೀಯ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಸಂಸ್ಕಾರ ಸಂಸ್ಕೃತಿಯ ಜಾಗೃತಿಗೆ ಕಾರಣವಾಗುತ್ತದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳವರು ನುಡಿದರು.
ಅವರು ತಮ್ಮ 21ನೇ ವರ್ಷದ ಚಾತುರ್ಮಾಸ್ಯ ವೃತ ಸಂಕಲ್ಪ ಯಾತ್ರೆಯ ಪ್ರಯುಕ್ತ ಜೂ. 20ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಈ ಬಾರಿಯ ಚಾತುರ್ಮಾಸ್ಯದ ವೇಳೆ ವಿಶೇಷವಾಗಿ ರಾಶಿ ಪೂಜೆ ಮಾಡುವ ಸಂಕಲ್ಪ ಹೊಂದಿದ್ದು ಇದರೊಂದಿಗೆ ಯುವ ಜನತೆಗೆ ಮಹತ್ವಪೂರ್ಣ ವಿಚಾರ ಸಂಕಿರಣವನ್ನು ನಡೆಸುವ ಯೋಜನೆಯೂ ಇದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಭಾಗಿಯಾಗಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭ ಶ್ರೀಮತ್‌ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಉಪಾಧ್ಯಕ್ಷ ಕಾಡಬೆಟ್ಟು ನಾಗರಾಜ ಆಚಾರ್ಯ, ಆನೆಗುಂದಿ ಗುರುಸೇವಾ ಪರಿಷತ್‌ ಕೇಂದ್ರ ಸಮಿತಿಯ ಅಧ್ಯಕ್ಷ ಕೆಮ್ಮಣ್ಣು ಗಣೇಶ್‌ ಆಚಾರ್ಯ, ಶ್ರೀ ಸರಸ್ವತಿ ಮಾತೃಮಂಡಳಿಯ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ್‌ ಆಚಾರ್ಯ, ಕನ್ಯಾನ ಜನಾರ್ಧನ ಆಚಾರ್ಯ, ಕೋಶಾಧಿಕಾರಿ ಬೆಳುವಾಯಿ ಅರವಿಂದ ವೈ, ಕಾರ್ಯದರ್ಶಿ ಲೋಲಾಕ್ಷ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ‌ ಜೊತೆ ಮೊಕ್ತೇಸರ ರವಿ ಆಚಾರ್ಯ ಕಾರ್ಕಳ, ರತ್ನಾಕರ ಆಚಾರ್ಯ ಕಾರ್ಕಳ, ಸುಧಾಕರ ಆಚಾರ್ಯ ಕಾರ್ಕಳ, ದಾನಶಾಲೆ ಸತೀಶ್ ಆಚಾರ್ಯ ಕಾರ್ಕಳ, ಸಲಹಾ ಸಮಿತಿ, ಭಜನಾ ಸಮಿತಿ, ಮಹಿಳಾ ಸಮಿತಿ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ‌ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಜೊತೆ ಮೊಕ್ತೇಸರ ನಿಟ್ಟೆ ಸುರೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ,‌ ವಂದಿಸಿದರು.









































































































error: Content is protected !!
Scroll to Top