ಅಜೆಕಾರು :‌ ಪಾರ್ಟ್‌ ಟೈಮ್‌ ಜಾಬ್‌ ಸಂದೇಶ – ಮಹಿಳೆಗೆ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ. ವಂಚನೆ

ಕಾರ್ಕಳ : ಪಾರ್ಟ್‌ ಟೈಮ್‌ ಜಾಬ್‌ ಸಂದೇಶ ಕಳುಹಿಸಿ ನಂತರ ವಿವಿಧ ಟಾಸ್ಕ್‌ಗಳನ್ನು ನೀಡಿ ಮಹಿಳೆಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಅಜೆಕಾರಿನಲ್ಲಿ ನಡೆದಿದೆ.
ಮರ್ಣೆ ಗ್ರಾಮದ ಸುಷ್ಮಾ ಎಂಬವರ ಮೊಬೈಲ್‌ ನಂಬ್ರದ ಟೆಲಿಗ್ರಾಂ ಖಾತೆಗೆ ಜೂ. 10ರಂದು Vanya ಎಂಬವರ ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿರುತ್ತದೆ. ಸುಷ್ಮಾ ಅವರು ಒಪ್ಪಿಕೊಂಡ ಮೇರೆಗೆ ಸ್ವಲ್ಪ ಸಮಯದ ನಂತರ Vanya ಹಾಗೂ Mentor Kuldeep ಎಂಬವರ ಟೆಲಿಗ್ರಾಂ ಖಾತೆಯಿಂದ ಟಾಸ್ಕ್ ನೀಡಿದ್ದು, ಪ್ರತಿ 3 ಟಾಸ್ಕ್ ಮುಗಿದ ನಂತರ ಹಣವನ್ನು ಸುಷ್ಮಾ ಅವರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿರುತ್ತಾರೆ. ಟಾಸ್ಕ್ ಗಳನ್ನು ಮುಕ್ತಾಯಗೊಳಿಸಿದ ನಂತರ ಸುಷ್ಮಾ ಅವರ ಆನ್ ಲೈನ್ ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡಲು Error ಬಂದಿರುವುದರಿಂದ ಖಾತೆಯಲ್ಲಿರುವ ಹಣದ 30% ಹಣವನ್ನು ಜಮೆ ಮಾಡಿದಲ್ಲಿ ಹಣವನ್ನು ನಿಮಗೆ ನೀಡುವುದಾಗಿ ಆರೋಪಿಗಳಾದ Vanya ಹಾಗೂ Mentor Kuldeep ಹೇಳಿದ್ದು ಅದರಂತೆ ಸುಷ್ಮಾ ಅವರಿಂದ ವಿವಿಧ ಖಾತೆಗಳಿಗೆ 8,53,225 ರೂ. ಹಣವನ್ನು ಜಮಾ ಮಾಡಿಸಿರುತ್ತಾರೆ. ಆ ಬಳಿಕ ಜಮೆ ಮಾಡಿದ ಹಣವನ್ನಾಗಲೀ, ಆದಾಯದ ಹಣವನ್ನಾಗಲೀ ಸುಷ್ಮಾ ಅವರ ಖಾತೆಗೆ ಜಮೆ ಮಾಡದೆ ಮೋಸಮಾಡಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top