ಜೋಡುರಸ್ತೆಯಲ್ಲಿ ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ ಗ್ರ್ಯಾಂಡ್ ಶುಭಾರಂಭ

ಕಾರ್ಕಳ : ಜೋಡುರಸ್ತೆಯ ವಿಜಯ ಕಾಂಪ್ಲೆಕ್ಸ್‌ನಲ್ಲಿ ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ ಫ್ಯಾಮಿಲಿ ರೆಸ್ಟೋರೆಂಟ್ ಜೂ. 8ರಂದು ಶುಭಾರಂಭಗೊಂಡಿತು. ಶಾಸಕ ವಿ. ಸುನಿಲ್ ಕುಮಾರ್ ನೂತನ ರೆಸ್ಟೋರೆಂಟ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾರ್ಕಳ ಉತ್ಸವ ಸಂದರ್ಭದಲ್ಲಿ ದೊನ್ನೆ ಬಿರಿಯಾನಿ ಮನೆ ಮಾತಾಗಿತ್ತು. ಉತ್ಸವ ಮುಗಿದರೂ ಇಂದಿಗೂ ದೊನ್ನೆ ಬಿರಿಯಾನಿ ರುಚಿ ಮರೆಯುವಂತಿಲ್ಲ. ಅದೇ ಮಾದರಿಯ ನಾಟಿ ಶೈಲಿಯ ದೊನ್ನೆ ಬಿರಿಯಾನಿ ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ವಿಜಯ ಕಾಂಪ್ಲೆಕ್ಸ್‌ನಲ್ಲಿ ರೆಸ್ಟೋರೆಂಟ್‌ ತೆರೆದಿರುವುದು ಕಾರ್ಕಳದ ಜನತೆಗೆ ಸಂತಸದ ವಿಚಾರವಾಗಿದೆ. ಸ್ವಚ್ಛತೆಗೆ ವಿಶೇಷ ಆದ್ಯತೆಯ ಮೂಲಕ ಗುಣಮಟ್ಟದ ರುಚಿಕರ ದೊನ್ನೆ ಬಿರಿಯಾನಿ ಗ್ರಾಹಕರಿಗೆ ಲಭ್ಯವಾಗಿ ಉತ್ತಮ ಸೇವೆ ನೀಡುವಂತಾಗಲಿ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ವೀಡಿಯೋ : https://www.facebook.com/share/v/1BkkUE7raJ















































































error: Content is protected !!
Scroll to Top