ಕಾರ್ಕಳ : ಬೈಲೂರಿನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಗರ್ ಆಚಾರ್ಯ ಅಗ್ನಿಪಥ್ ಯೋಜನೆಯಲ್ಲಿ ಆಯ್ಕೆಯಾಗಿದ್ದಾರೆ. ಇವರು ಕೌಡೂರು ಗ್ರಾಮದ ಸುಧಾಕರ ಆಚಾರ್ಯ ಮತ್ತು ವೀಣಾ ದಂಪತಿಯ ಪುತ್ರ. ಕಳೆದ ಏಳು ತಿಂಗಳಿನಿಂದ ಬೆಂಗಳೂರಿನ ಎಂಇಜಿ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದು, ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸಲು ಜೂ. 18ಕ್ಕೆ ತೆರಳಲಿದ್ದಾರೆ.
ಭಾರತೀಯ ಸೇನೆಗೆ ಬೈಲೂರಿನ ಯುವಕ







































