ಕಾರ್ಕಳ : ಸ್ಕೂಟಿಗೆ ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರೆ ಸ್ಥಳದಲ್ಲೇ ಸಾವನಪ್ಪಿದ ದುರ್ಘಟನೆ ನಿಟ್ಟೆಯಲ್ಲಿ ಜೂ. 4 ರಂದು ಸಂಭವಿಸಿದೆ. ನಿಟ್ಟೆ ಗುಂಡಾಜೆ ನಿವಾಸಿ ಯಶವಂತಿ ಮೃತ ಮಹಿಳೆ.
ಯಶವಂತಿ ಅವರು ಕಾರ್ಕಳದಲ್ಲಿ ಕೆಲಸ ಮುಗಿಸಿ ನಿಟ್ಟೆ ಗುಂಡಾಜೆಯತ್ತ ಸಾಗುತ್ತಿರುವಾಗ ನಿಟ್ಟೆಯಲ್ಲಿ ಹಿಂದಿನಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಯಶವಂತಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
































































