ಮಂಗಳೂರಿನಲ್ಲಿ ಗುಡ್ಡ ಕುಸಿತಕ್ಕೆ ಅಜ್ಜಿ, ಮೊಮ್ಮಕ್ಕಳು ಬಲಿ – ಬದುಕುಳಿದ ತಾಯಿ

ಮಂಗಳೂರು : ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ ಮೊಮ್ಮಕ್ಕಳು ಸಾವನಪ್ಪಿ, 9 ಗಂಟೆಗಳ ಜೀವನ್ಮರಣ ಹೋರಾಟ ನಡೆಸಿದ ತಾಯಿ ಬದುಕುಳಿದ ಘಟನೆ ಮಂಗಳೂರಿನ ದೇರಳ ಕಟ್ಟೆ ಸಮೀಪದ ಮೊಂಟೆಪದವು ಕೋಡಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಒಂದೇ ಕುಟುಂಬದ ಐವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ (54) ಮಕ್ಕಳಾದ ಮೂರು ವರ್ಷದ ಮಗು ಆರ್ಯನ್, ಎರಡು ವರ್ಷ ಪ್ರಾಯದ ಆರುಷ್ ಮೃತರು. ಆರುಷ್ ನನ್ನು ಮಣ್ಣಿನಡಿಯಿಂದ ತೆಗೆದು ರಕ್ಷಣೆಗೆ ಯತ್ನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಅಸುನೀಗಿದೆ. ಗಾಯಗೊಂಡಿರುವ ತಾಯಿ ಅಶ್ವಿನಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ
ಮೊಂಟೆಪದವು ಕೋಡಿಯಲ್ಲಿ ಭಾರೀ ಮಳೆಗೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕಾಂತಪ್ಪ ಪೂಜಾರಿ ಎಂಬುವವರ ಮನೆ ಮೇಲೆ ಬೃಹತ್‌ ಮರದ ಸಹಿತ ಸುಮಾರು 30 ಅಡಿ ಮಣ್ಣು ಕುಸಿದು ಅನಾಹುತವಾಗಿತ್ತು.





























































































































error: Content is protected !!
Scroll to Top