ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಹಾಗೂ ಶಾರದಾ ಮಹಿಳಾ ಮಂಡಳಿ ಅನಂತಶಯನ ಇದರ ಸಹಭಾಗಿತ್ವದಲ್ಲಿ ಶಾರದಾ ಮಹಿಳಾ ಮಂಡಳಿಯ ಅಧ್ಯಕ್ಷೆ, ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಮನೋಹರ ಅವರ ʼಮಾನನಿಧಿ ಮೌನವಾದʼ ನಾಟಕ ಕೃತಿ ಮತ್ತು ಅವರ ಪುತ್ರಿ ಸ್ವಾತಿ ಅಜಿತ್ ಶರ್ಮ ಅವರ ʼಪಂಜರದೊಳಗಿನ ಪಕ್ಷಿʼ ಎಂಬ ಚೊಚ್ಚಲ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಪೆರ್ವಾಜೆ ಶಾಲೆಯಲ್ಲಿ ಜರುಗಿತು.
ಲೇಖಕಿ ಡಾ. ಜಾನಕಿ ಸುಂದರೇಶ್ ಅವರು ʼಮಾನನಿಧಿ ಮೌನವಾದʼ ನಾಟಕ ಕೃತಿಯನ್ನು ಹಾಗೂ ಸ್ವಾತಿ ಅಜಿತ್ ಶರ್ಮ ಅವರ ಹೆತ್ತವರಾದ ಮನೋಹರ ರಾವ್ ಹಾಗೂ ಸಾವಿತ್ರಿ ಮನೋಹರ್ ದಂಪತಿ ʼಪಂಜರದೊಳಗಿನ ಪಕ್ಷಿʼ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಲೇಖಕರು ಕೃತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಪೂರ್ಣಚಂದ್ರ ಹಂದಿಗೋಡು ಅವರು ತೆಂಗಿನ ಕರಟದಿಂದ ಮಾಡಿದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡದಲ್ಲಿ ಪೂರ್ಣ ಅಂಕಗಳನ್ನು ಪಡೆದ ಅಕ್ಷರ ಅವರನ್ನು ಸನ್ಮಾನಿಸಲಾಯಿತು. ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆದ್ಯಾ ಶರ್ಮ, ವಿಶ್ರುತ್ ಶರ್ಮ, ನಿರ್ಜರ ರಾವ್, ಓಂಕಾರ್ ರಾವ್ ಪ್ರಾರ್ಥಿಸಿದರು. ಜಾಗೃತಿಯ ಕಾರ್ಯದರ್ಶಿ ಮಾಲತಿ ಜಿ.ಪೈ ಸ್ವಾಗತಿಸಿದರು. ಶಿಕ್ಷಕಿಯರಾದ ಜ್ಯೋತಿ ಪಾಠಕ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿ ಹೆಗ್ಡೆ ವಂದಿಸಿದರು.
































































