ಹಲುವಳ್ಳಿ ಯೂಥ್ ಕ್ಲಬ್ 9ನೇ ವಾರ್ಷಿಕೋತ್ಸವ – ಸಾಮೂಹಿಕ ಸತ್ಯನಾರಾಯಣ ಪೂಜೆ

ಉಡುಪಿ : ಹಲುವಳ್ಳಿ ಯೂಥ್ ಕ್ಲಬ್‌ನ 9ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಹಲುವಳ್ಳಿ ಗೋಪಾಲಕೃಷ್ಣ ಮಠದ ಮುಂಭಾಗ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ವಿಜಯ ಕುಮಾರ್ ಕೊಡಿಯಾಲಬೈಲು ನಿರ್ದೇಶನದ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನಗೊಂಡಿತು.

ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರ. ಅಂತೆಯೇ ಹಲುವಳ್ಳಿಯ ಪ್ರಗತಿಯಲ್ಲಿ ಯೂಥ್‌ ಕ್ಲಬ್‌ ಸದಾ ಕಾರ್ಯೋನ್ಮಖವಾಗಿರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ ಕರ್ಜೆ, ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿ, ಪ್ರಮುಖರಾದ ರಾಘವೇಂದ್ರ ಶೆಟ್ಟಿ ಕರ್ಜೆ, ಪ್ರದೀಪ್ ಕುಮಾರ್ ಶೆಟ್ಟಿ, ಶೇಖರ್ ನಾಯ್ಕ್, ಚಂದ್ರಶೇಖರ ಸಾಲ್ಯಾನ್, ಉದಯ್ ಕೋಟ್ಯಾನ್, ಸಂಘದ ಅಧ್ಯಕ್ಷ ಸುಧಾಕರ್ ಹಲುವಳ್ಳಿ, ಕಾರ್ಯದರ್ಶಿ ವಿಜಯ್ ಕುಮಾರ್, ಖಜಾಂಜಿ ಸುರೇಶ ಕೋಟ್ಯಾನ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.































































































error: Content is protected !!
Scroll to Top