ದುರ್ಗ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಸಹಸ್ರ ಮೋದಕ ಹವನ

ಕಾರ್ಕಳ : ದುರ್ಗ ಗ್ರಾಮದ ಶ್ರೀಹರಿಹರೇಶ್ವರ ದೇವಳದ ಸಭಾಭವನದಲ್ಲಿ ಮೇ 19ರಂದು ಸಹಸ್ರ ಮೋದಕ ಹವನ ಜರುಗಿತು. ವೇದಮೂರ್ತಿ ವಿರೂಪಾಕ್ಷ ಮರಾಠೆ ಅವರ ನೇತೃತ್ವದಲ್ಲಿ ವೇದಮೂರ್ತಿ ಸುರೇಶ ದಾತೆ ಅವರ ಮುಂದಾಳತ್ವದಲ್ಲಿ ವೈದಿಕ ಕಾರ್ಯ ನೆರವೇರಿಸಿತು. ಮಹಾಗಣಪತಿಯನ್ನು ಕುರಿತಾಗಿ ಡಾ. ಎಂ. ಸುದರ್ಶನ ಚಿಪಳೂಣಕರ್‌ ಮಾವಿನಮಲೆ ಅವರು ಬರೆದ ದುರ್ಗಾಧೀಶ ಶ್ರೀಮಹಾಗಣಪತಿ ಸುಪ್ರಭಾತ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ರಮಾನಾಥ ಲೋಂಢೆ, ವೇದಮೂರ್ತಿ ಗೋಪಾಲಕೃಷ್ಣ ಚಿಪಳೂಣಕರ್‌ ಕಾಳಾಜೆ‌, ವಿಘ್ನೇಶ ಫಾಟಕ್, ದೇವಳದ ಆಡಳಿತ ಮೊಕ್ತೇಸರ ಪ್ರದೀಪ ಫಾಟಕ್ ಗೋಕುಲ, ಸುಪ್ರಭಾತ ರಾಗ ಸಂಯೋಜನೆ ಮಾಡಿರುವ ವಿದುಷೀ ಅನಸೂಯಾ ಫಾಟಕ್, ಕೃಷ್ಣ ಚಿಪಳೂಣಕರ್ ಮಾವಿನಮಲೆ‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅರ್ಚನಾ ಸುದರ್ಶನ ಚಿಪಳೂಣಕರ್ ಕಾರ್ಯಕ್ರಮ ನಿರೂಪಿಸಿದರು.‌





























































































































error: Content is protected !!
Scroll to Top