ಹೊಸ ರೀತಿಯ ತುಳು ಚಿತ್ರ ದಸ್ಕತ್‌

ಹೌದು… ದಸ್ಕತ್‌ ಸಿನಿಮಾ ಬಿಡುಗಡೆಯ ಮೊದಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ತುಳುಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಒಂದು ಹೊಸ ರೀತಿಯ ಅಪ್ಪಟ ತುಳುನಾಡಿನ ಸಿನಿಮಾವಾಗಿ ತುಳು ಚಿತ್ರರಂಗದಲ್ಲೇ ಒಂದು ದೊಡ್ಡ ಅಲೆಯನ್ನು ಎಬ್ಬಿಸಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವಾಗುತ್ತಿದೆ. ಸುಮಾರು 70 ದಿನಗಳನ್ನು ಪೂರೈಸಿದೆ. ಬೆಂಗಳೂರು, ಹೊರದೇಶಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಮಾತ್ರವಲ್ಲದೇ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗಗಳಿಗೆ ಕೂಡ ಆಯ್ಕೆಯಾಗಿದೆ. ಈ ವರ್ಷದ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 3ನೇ ಸ್ಥಾನವನ್ನು ಗಳಿಸಿ ತುಳುನಾಡಿಗೆ ಹಿರಿಮೆ ತಂದುಕೊಟ್ಟಿದೆ.

ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ದಸ್ಕತ್ ಸಿನಿಮಾವನ್ನು ನೋಡಿ ಮೆಚ್ಚಿ ಕನ್ನಡದಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ
ಜಗದೀಶ್ ಎನ್. ಅರೇಬಿನ್ನಮಂಗಳ ಅವರು.‌ ತಾವು ತಮ್ಮ ಜೈ ಭಜರಂಗಿ ಫಿಲ್ಮ್ಸ್ ಹಾಗೂ ಬೋಧಿ ಪ್ರೊಡಕ್ಷನ್ಸ್ ಜೊತೆಗೂಡಿ ಕನ್ನಡಕ್ಕೆ ತರಲು ಮುಂದಾಗಿದ್ದಾರೆ. ಇನ್ನು ಈ ಸಿನಿಮಾವನ್ನು ಇಷ್ಟಪಟ್ಟು, ಕಷ್ಟಪಟ್ಟು ಕಥೆ ಬರೆದು, ನಿರ್ದೇಶನ ಮಾಡಿ ತಾನು ಅಂದುಕೊಂಡಂತೆ ತೆರೆ ಮೇಲೆ ತಂದು ಜನರ ಸಿಳ್ಳೆ, ಚಪ್ಪಾಳೆಯ ಸುರಿಮಳೆ ಪಡೆದ ನಿರ್ದೇಶಕ ಕಾಮಿಡಿ ಖಿಲಾಡಿ ಖ್ಯಾತಿಯ ಪ್ರತಿಭಾವಂತ ಅನೀಶ್ ಪೂಜಾರಿ ವೇಣೂರು.

ಅಲ್ಲದೆ ಕನಸು ಮಾರಾಟಕಿದೆ ಸಮಯದಿಂದ ಇಲ್ಲಿಯವರೆಗೂ ತಂಡದ ಮುಖ್ಯ ಭಾಗವಾಗಿರುವ ಪ್ರಜ್ಞೆಶ್ ಶೆಟ್ಟಿ ಈ ಸಿನಿಮಾದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಒಂದು ಸಿನಿಮಾದ ಯಶಸ್ಸಿನಲ್ಲಿ ಅದರ ಕಥೆ ಎಷ್ಟು ಮುಖ್ಯವಾಗಿರುತ್ತೋ ಅಷ್ಟೇ ಆ ಸಿನಿಮಾದ ಪಾತ್ರವರ್ಗ, ತಾಂತ್ರಿಕ ವರ್ಗವು ಮುಖ್ಯವಾಗಿರುತ್ತದೆ. ಹೀಗಿರುವಾಗ ಮುಖ್ಯ ಭೂಮಿಕೆಯಲ್ಲಿ ನಟಿಸಿ ಸಿನಿಮಾಕ್ಕೆ ಅರ್ಥಪೂರ್ಣ ರೂಪ ಕೊಟ್ಟು ಪ್ರತಿಯೊಂದು ಪಾತ್ರವು ಕೊನೆವರೆಗೂ ಜೀವಂತವಾಗಿ ಉಳಿಯುವಂತೆ ಮಾಡಿದ ಈ ಸಿನಿಮಾದ ಎಲ್ಲ ಕಲಾವಿದರರಿಗೂ ನನ್ನದೊಂದು ಸಲಾಮ್.

ದೀಕ್ಷಿತ್ ಕೆ. ಅಂದಿಜೆ, ಮೋಹನ್ ಶೆನಿ, ದೀಪಕ್ ರೈ ಪಾಣಾಜೆ, ಮಿಥುನ್‌ ರಾಜ್, ಭವ್ಯ ಪೂಜಾರಿ, ಯುವ ಶೆಟ್ಟಿ, ಚಂದ್ರಹಾಸ ಉಳ್ಳಾಲ್, ಯೋಗೀಶ್ ಶೆಟ್ಟಿ, ನೀರಜ್ ಕುಂಜರ್ಪ ಹಾಗೂ ಸೃಜನಾತ್ಮಕವಾಗಿ ಸೆರೆಹಿಡಿದ ಸಂತೋಷ್ ಆಚಾರ್ಯ ಗುಂಪಾಲಜೆ, ತಮ್ಮ ಪ್ರಥಮ ಪ್ರಯತ್ನದಲ್ಲೇ ಹಿಟ್‌ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಸಮರ್ಥನ್ ರಾವ್, ಸಂಕಲನ ಮಾಡಿರುವ ಗಣೇಶ್ ನಿರ್ಚಾಲ್, VFX ಕಾರ್ಯ ಮಾಡಿರುವ ಬೀ ಕ್ರಿಯೇಟಿವ್ ಸ್ಟುಡಿಯೋಸ್, ನಿಖಿಲ್ ಕರಿಯಪ್ಪ, ನಿರ್ದೇಶನ ತಂಡದ ಮನೋಜ್ ಆನಂದ್, ನೀರಜ್ ಕುಂಜರ್ಪ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ, ಮಿಥುನ್ ಪೊಳಲಿ, ತರುಣ್ ಶರಣ್, ಯೋಗೀಶ್, ಲೋಹಿತ್, ಪ್ರಜ್ವಲ್ ಗೌಡ, ಅನೂಪ್ ಭಟ್, ಅಭಿಜಿತ್ ಶೆಟ್ಟಿ ತಂಡ ಚಿತ್ರ ಚೆನ್ನಾಗಿ ಮೂಡಿಬರುವಲ್ಲಿ ಶ್ರಮಿಸಿದ್ದಾರೆ.

ದಸ್ಕತ್ ಸಿನಿಮಾ ಪ್ರೇಕ್ಷಕರ ಮನಸಲ್ಲಿ ಉಳಿಯಲಿ. ಗೆಲ್ಲಲಿ, ಯಶಸ್ವಿಯಾಗಲಿ…

ಬರಹ : ಹರಿಪ್ರಸಾದ್ ಗುಡಿಗಾರ್ ನಿಟ್ಟೆ





























































































error: Content is protected !!
Scroll to Top