ಉಡುಪಿ : ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ಅರ್ಚಕ ಜಗದೀಶ್ ಭಟ್ (54) ಅವರು ಹೃದಯಾಘಾತಕ್ಕೀಡಾದ ಘಟನೆ ಮೇ 5ರಂದು ಸಂಭವಿಸಿದೆ. ತಕ್ಷಣ ಅವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈ ವೇಳೆಗಾಗಲೇ ಜಗದೀಶ್ ಭಟ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೂಲತಃ ಶಿರ್ಲಾಲು ಗ್ರಾಮದ ಜಗದೀಶ್ ಭಟ್ ಅವರು ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದ್ದ ಊರು ಶೋಕತಪ್ತವಾಗಿದೆ. ಮೇ 4ರಂದು ಕ್ಷೇತ್ರಕ್ಕೆ ಹೊರೆಕಾಣಿಕೆ ಸಮಪರ್ಣೆಯಾಗಿದ್ದು ಮೇ 12ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.
ದೇವತಾ ಕಾರ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೀಡಾದ ಜಗದೀಶ್ ಭಟ್






























































